
ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ವಿರುದ್ಧ ರೆಡ್ ಕಾರ್ಡನ್ ನೋಟಿಸ್ ಜಾರಿ ಮಾಡಿರಲು ಕಾರಣವೇನು ಎಂದು ಜಾರಿ ನಿರ್ದೇಶನಾಲಯ(ಇಡಿ)ವನ್ನು ಇಂಟರ್ ಪೋಲ್ ಪ್ರಶ್ನಿಸಿದೆ. ಪ್ರತಿಕ್ರಿಯೆ ಕೋರಿ ಇಂಟರ್ ಪೋಲ್ ಕಳುಹಿಸಿದ ಪತ್ರವು ಆ.20ರಂದು ಇ.ಡಿ. ಕೈಸೇರಿದೆ.
ಹಣಕಾಸು ಅವ್ಯವಹಾರ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ವಿರುದ್ಧ ಏನೇನು ಸಾಕ್ಷ್ಯಗಳಿವೆ, ಪ್ರಕರಣದ ಇತರೆ ಆರೋಪಿಗಳ ವಿವರ, ಯಾವ ನಿರ್ದಿಷ್ಟ ಅಪರಾಧಕ್ಕಾಗಿ ಕೇಸು ದಾಖಲಿಸಲಾಗಿದೆ ಮತ್ತು ತನಿಖೆ ಇಷ್ಟು ವಿಳಂಬವಾಗಲು ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳನ್ನೂ ಇಂಟರ್‍ಪೋಲ್ ಕೇಳಿದೆ. ಇದೇ ವೇಳೆ, ಇಂಟರ್‍ಪೋಲ್‍ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪರಿಣತವಾದ ಲಿಂಡ್‍ಬಾರ್ಗ್ ಸಂಸ್ಥೆಯು ಲಲಿತ್ ಪರ ವಾದ ಮಂಡಿಸಿದ್ದು, ಇದು ರಾಜಕೀಯ ಪ್ರೇರಿತ ದೂರು ಎಂದು ಇಂಟರ್‍ಪೋಲ್‍ಗೆ ಮಾಹಿತಿ ನೀಡಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಈ ನಡುವೆ, ಜಾರಿ ನಿರ್ದೇಶನಾಲಯವು ಇಂಟರ್‍ಪೋಲ್‍ಗೆ ಎಲ್ಲ ದಾಖಲೆಗಳನ್ನೂ ಒದಗಿಸಿದೆ. ಈ ಬಗ್ಗೆ ಮಾತನಾಡಿರುವ ಹಿರಿಯ ಅಧಿಕಾರಿಯೊಬ್ಬರು, ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಸಿಬಿಐನಂತಹ ತನಿಖಾ ಸಂಸ್ಥೆ ಕೋರಿಕೆ ಸಲ್ಲಿಸಿದ ಬಳಿಕ, ಪ್ರಕರಣದ ಬಗ್ಗೆ ವಿವರ ಕೇಳುವ ಅಧಿಕಾರ ಇಂಟರ್‍ಪೋಲ್‍ಗೆ ಇರುವುದಿಲ್ಲ ಎಂದು ಹೇಳಿದ್ದಾರೆ.
Advertisement