ಅರೆಸೇನಾ ಪಡೆಯಲ್ಲಿ ಮಹಿಳೆಯರಿಗೆ ಶೇ.33% ಮೀಸಲಾತಿ: ರಾಜನಾಥ್ ಸಿಂಗ್

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಎಲ್ಲಾ ಅರೆಸೇನಾ ಪಡೆಯಲ್ಲಿ ಮಹಿಳೆಯರಿಗೆ ಶೇ.33%ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ...
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಎಲ್ಲಾ ಅರೆಸೇನಾ ಪಡೆಯಲ್ಲಿ ಮಹಿಳೆಯರಿಗೆ ಶೇ.33%ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ಈ ಕುರಿತಂತೆ ಸಿಐಎಸ್ಎಫ್ ಪ್ರಧಾನ ತರಬೇತಿ ಕೇಂದ್ರದಲ್ಲಿ ಮಾತನಾಡಿರುವ ಅವರು, ಅರೆಸೇನೆಯ ಆಯ್ಕೆಯಲ್ಲಿ ಇದೀಗ ಮಹಿಳೆಯರಿಗೆ ಕೇವಲ ಶೇ.5.04ರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ. ಹೀಗಾಗಿ ಮಹಿಳೆಯರ ಮೀಸಲಾತಿ ಸಂಖ್ಯೆಯನ್ನು ಹೆಚ್ಚಳ ಮಾಡುವ ಅಗತ್ಯವಿದ್ದು, ಎಲ್ಲಾ ರೀತಿಯ ಅರೆಸೇನಾ ಪಡೆ ಆಯ್ಕೆಯಲ್ಲೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಇನ್ನು ಮುಂದೆ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭದ್ರತಾ ಪಡೆಗಳ ಸಂಖ್ಯೆ ಕುರಿತಂತೆ ಮಾತನಾಡಿರುವ ಅವರು, ಪ್ರಸ್ತುತ ಗಡಿ ಭದ್ರತಾ ಪಡೆಗಳ ಸಂಖ್ಯೆ 1.36ಲಕ್ಷ ಇದ್ದು ಮುಂದಿನ ದಿನಗಳಲ್ಲಿ ಇದರ ಸಂಖ್ಯೆಯನ್ನು 2 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ನಂತರ ಸಿಐಎಸ್ಎಫ್ ನ ಮಹಾನಿರ್ದೇಶಕ ನಿರ್ದೇಶಕ ಸುರೇಂದರ್ ಸಿಂಗ್ ಮಾತನಾಡಿ ಪ್ರಸ್ತುತ ಗಡಿಯಲ್ಲಿ ಮತ್ತಷ್ಟು ಭದ್ರತೆಯ ಅಗತ್ಯವಿದ್ದು, ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ತಯಾರಿರುವ ಅಧಿಕಾರಿಯೊಬ್ಬರ ಅಗತ್ಯವಿದೆ ಎಂದು ಗೃಹ ಸಚಿವರ ಬಳಿ ತಮ್ಮ ಬೇಡಿಕೆಯನ್ನಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com