ರಾಜ್ ಠಾಕ್ರೆ
ರಾಜ್ ಠಾಕ್ರೆ

ಗುಜರಾತಿಯೋಬ್ಬರು ಪ್ರಧಾನಿಯಾಗಿರುವುದರಿಂದ ಜೈನರ ಧೈರ್ಯ ಹೆಚ್ಚಿದೆ: ರಾಜ್ ಠಾಕ್ರೆ

ಮಹಾರಾಷ್ಟ್ರ ನವನಿರ್ಮಾಣ್ ಸೇನೆ(ಎಂಎನ್ಎಸ್) ಯ ರಾಜ್ ಠಾಕ್ರೆ, ಗುಜರಾತಿಯೊಬ್ಬರು ಭಾರತದ ಪ್ರಧಾನಿಯಾಗಿರುವುದರಿಂದ ಜೈನರಿಗೆ ಧೈರ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಮಾಂಸ ಮಾರಾಟ ನಿಷೇಧ ಮಾಡಿರುವುದಕ್ಕೆ ಆಕ್ರೋಷಗೊಂಡಿರುವ ಮಹಾರಾಷ್ಟ್ರ ನವನಿರ್ಮಾಣ್ ಸೇನೆ(ಎಂಎನ್ಎಸ್)ಯ ರಾಜ್ ಠಾಕ್ರೆ, ಗುಜರಾತಿಯೊಬ್ಬರು ಭಾರತದ ಪ್ರಧಾನಿಯಾಗಿರುವುದರಿಂದ ಜೈನರಿಗೆ ಧೈರ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಗುಜರಾತ್ ನವರಾದ್ದರಿಂದ ಜೈನರಿಗೆ ವಿಶೇಷ ಮನ್ನಣೆ ಪಡೆಯುತ್ತಿದ್ದಾರೆ, ಮಾಂಸ ನಿಷೇಧ ವಿಷಯ ಹಿಂದುಗಳು ಹಾಗೂ ಜೈನರ ವಿರುದ್ಧದ ವಿಷಯವಾಗಿ ಮಾರ್ಪಾಡಾಗಿದೆ. ಮಾಂಸ ಮಾರಾಟ ಮಾಡುವವರಿಗೆ ಎಂಎನ್ಎಸ್ ಖಂಡಿತವಾಗಿಯೂ ಬೆಂಬಲಿಸಲಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ಜೈನ್ ಸಮುದಾಯದಲ್ಲಿ ದಿಗಂಬರರು ನಗ್ನವಾಗಿ ಸಂಚರಿಸುತ್ತಿರುತ್ತಾರೆ ಅದರ ಬಗ್ಗೆ ವಿರೋಧವಿಲ್ಲ ಎಂದಾದರೆ ಜೈನರ ಹಬ್ಬದಂದು ಮಾಂಸ ಮಾರಾಟ ಮಾಡುವುದಕ್ಕೆ ಸಮಸ್ಯೆ ಏನು ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ. ಇಂದು ಜೈನರಿಗಾಗಿ ಮಾಂಸ ಮಾರಾಟ ನಿಷೇಧ ಮಾಡುವುದಾದರೆ ನಾಳೆ ಮುಸ್ಲಿಮರು ರಂಜಾನ್ ಸಂದರ್ಭದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು ಕೇಳುತ್ತಾರೆ ಆಗಲೂ ನಿಷೇಧ ಮಾಡುತ್ತಾರಾ ಎಂದು ರಾಜ್ ಠಾಕ್ರೆ ಕೇಳಿದ್ದಾರೆ. ಮಾಂಸ ಮಾರಾಟ ನಿಷೇಧವನ್ನು ಮುಂಬೈ ಹೈಕೋರ್ಟ್ ಸಹ ಪ್ರಶ್ನಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com