ಉಬರ್ ಕ್ಯಾಬ್‌ ರೇಪ್ ಪ್ರಕರಣ: ಹೈಕೋರ್ಟ್ ಆದೇಶ ರದ್ದುಗೊಳಿಸಿದ 'ಸುಪ್ರೀಂ'

ಉಬರ್ ಕ್ಯಾಬ್‌ನಲ್ಲಿ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ಥೆಯ ಮರುವೈದ್ಯಕೀಯ...
ಉಬರ್ ಕ್ಯಾಬ್
ಉಬರ್ ಕ್ಯಾಬ್

ನವದೆಹಲಿ: ಉಬರ್ ಕ್ಯಾಬ್‌ನಲ್ಲಿ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ಥೆಯ ಮರುವೈದ್ಯಕೀಯ ಪರೀಕ್ಷೆಗೆ ಆದೇಶಿಸಿದ್ದ ದೆಹಲಿ ಹೈಕೋರ್ಟ್ ನ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

2015ರ ಮಾರ್ಚ್ 4 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ 13 ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ಥ ಯುವತಿಯ ಮರುವೈದ್ಯಕೀಯ ಪರೀಕ್ಷೆ ನಡೆಸುವಂತೆ ಆದೇಶಿಸಿ, ಕ್ಯಾಬ್ ಚಾಲಕನಿಗೆ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜಗದೀಶ್ ಸಿಂಗ್ ಕೇಹರ್ ಹಾಗೂ ಆದರ್ಶ್ ಕುಮಾರ್ ಗೋಯೆಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ದೆಹಲಿ ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ರದ್ದುಗೊಳಿಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಸಾಬೀತಾಗಿದ್ದರು. 13 ಸಾಕ್ಷಿಗಳ ಮರುವಿಚಾರಣೆ ಹಾಗೂ ಸಂತ್ರಸ್ತೆಗೆ ಮರುವೈದ್ಯಕೀಯ ಪರೀಕ್ಷೆಗೆ ಆದೇಶಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಗುಡಗಾಂವ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ (27) ಶುಕ್ರವಾರ ರಾತ್ರಿ ನವದೆಹಲಿಯ ಇಂದರ್‌ಲೋಕ ಪ್ರದೇಶದಲ್ಲಿರುವ ಮನೆಗೆ ಉಬರ್‌ ಟ್ಯಾಕ್ಸಿಯ ಮೂಲಕ ಹೋಗುತ್ತಿದ್ದಳು. ಕಾರಿನ ಹಿಂದಿನ ಸೀಟಿನಲ್ಲಿದ್ದ ಆಕೆಗೆ ಜೋಂಪು ಹತ್ತಿತ್ತು. ರಾತ್ರಿ 9.30ರ ಹೊತ್ತಿಗೆ ಆಕೆಗೆ ಎಚ್ಚರವಾದಾಗ ಟ್ಯಾಕ್ಸಿ ನಿರ್ಜನ ಸ್ಥಳದಲ್ಲಿ ನಿಂತಿತ್ತು. ಟ್ಯಾಕ್ಸಿ ಬಾಗಿಲು ಲಾಕ್‌ ಆಗಿದ್ದವು. ಆಕೆ ಕೂಗಿಕೊಳ್ಳಲು ಯತ್ನಿಸಿದಾಗ ಚಾಲಕ ಆಕೆಗೆ ಥಳಿಸಿ ಅತ್ಯಾಚಾರ ಎಸಗಿದ. ಆನಂತರ ಆಕೆಯ ಮನೆಯ ಬಳಿ ಡ್ರಾಪ್‌ ಮಾಡಿದ ಚಾಲಕ, ಬಾಯಿ ಬಿಟ್ಟರೆ ಕೊಂದುಹಾಕುವುದಾಗಿ ಬೆದರಿಕೆ ಹಾಕಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com