ಇಸ್ರೇಲ್ ನಿಂದ 10 ಸಶಸ್ತ್ರ ಕ್ಷಿಪಣಿ ಡ್ರೋನ್ ಖರೀದಿಗೆ ಕೇಂದ್ರ ಅಂಗೀಕಾರ

ಗಡಿಯಾಚೆಗಿನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿರುವ ಭಾರತ ಸರ್ಕಾರ ಇಸ್ರೇಲ್ ನಿಂದ 10 ಸಶಸ್ತ್ರ ಕ್ಷಿಪಣಿ ಖರೀದಿಗೆ ಅಂಗೀಕಾರ ನೀಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗಡಿಯಾಚೆಗಿನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿರುವ ಭಾರತ ಸರ್ಕಾರ ಇಸ್ರೇಲ್ ನಿಂದ 10 ಸಶಸ್ತ್ರ ಕ್ಷಿಪಣಿ ಖರೀದಿಗೆ ಅಂಗೀಕಾರ ನೀಡಿದೆ. ಸುಮಾರು 400 ಮಿಲಿಯನ್ ಡಾಲರ್ ವೆಚ್ಚದ ಡ್ರೋನ್ ಖರೀದಿ ಪ್ರಸ್ತಾವಕ್ಕೆ ಇಸ್ರೇಲ್ ಜೊತೆ  ಒಪ್ಪಂದ ಮಾಡಿಕೊಳ್ಳಲಾಗಿದೆ.


ಭಾರತೀಯ ವಾಯುಸೇನೆ ಈ ಡ್ರೋನ್ ಗಳ ಜೊತೆ ಕಾರ್ಯ ನಿರ್ವಹಿಸಲಿದೆ, ಇವುಗಳಿಂದ ಶತ್ರ ದೇಶಗಳ ರಾಡಾರ್ ಯಂತ್ರವನ್ನು ಪತ್ತೆ ಹಚ್ಚಬಹುದಾಗಿದೆ. ಪ್ರಸಕ್ತ ವರ್ಷದ ಅಂತ್ಯದೊಳಗೆ ಈ ಡ್ರೋನ್ ಭಾರತೀಯ ವಾಯುಸೇನೆ ಸೇರಲಿವೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.


 ಇನ್ನು 2012ರಲ್ಲೇ ಸಶಸ್ತ್ರ ಕ್ಷಿಪಣಿ ಡ್ರೋನ್ ಖರೀದಿಗೆ ಭಾರತೀಯ ವಾಯುಸೇನೆ ಒತ್ತಾಯಿಸಿತ್ತು. ಆದರ ಯುಪಿಎ ಸರ್ಕಾರ ಇದಕ್ಕೆ ಸಮ್ಮತಿಸಿರಲಿಲ್ಲ. ಆದರೆ ಮೋದಿ ಸರ್ಕಾರ ಸದ್ದಿಲ್ಲದೇ ಅತಿ ಶೀಘ್ರವಾಗಿ ಡ್ರೋನ್ ಖರೀದಿಗೆ ಒಪ್ಪಿಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com