ಎನ್‍ಡಿಎ ಮೈತ್ರಿ ನಾಯಕರು
ದೇಶ
ಬಿಹಾರ ಬಿಜೆಪಿಯಲ್ಲೀಗ ಸೀಟು ಹಂಚಿಕೆ ಚರ್ಚೆ
ಬಿಹಾರ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ...
ನವದೆಹಲಿ: ಬಿಹಾರ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ.
243 ಸೀಟುಗಳನ್ನು ಹೇಗೆ ಹಂಚಿಕೆ ಮಾಡುವುದು ಎಂಬ ಗೊಂದಲದಲ್ಲಿರುವ ಬಿಜೆಪಿಯ 3 ಮಿತ್ರಪಕ್ಷ ಗಳು, ದೆಹಲಿಗೆ ದೌಡಾಯಿಸುತ್ತಿದ್ದಾರೆ. ಆರ್ ಎಲ್‍ಎಸ್ಪಿ ನಾಯಕ ಉಪೇಂದ್ರ ಕುಶ್ವಾಹ, ಮಾಜಿ ಸಿಎಂ ಜಿತನ್ ರಾಂ ಮಾಂಝಿ, ಎಲ್ ಜೆಪಿ ಮುಖ್ಯಸ್ಥ ಪಾಸ್ವಾನ್ ಗುರುವಾರ ಬಿಜೆಪಿ ನಾಯಕ ಅನಂತ್‍ಕುಮಾರ್ ನಿವಾಸಕ್ಕೆ ತೆರಳಿ ಸೀಟುಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ.
ಎನ್‍ಡಿಎಗೆ ಗೆಲವು?: ಬಿಹಾರದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಎನ್‍ಡಿಎ ಮೈತ್ರಿಕೂಟ ಬಹುಮತ(125) ಪಡೆಯಲಿದೆ. ಜೆಡಿಯು ಒಕ್ಕೂಟಕ್ಕೆ 106 ಸ್ಥಾನ ಸಿಗಲಿದೆ ಎಂದು ಇಂಡಿಯಾ ಟುಡೆಸಿಸಿರೋ ನಡೆಸಿದ ಸಮೀಕ್ಷೆ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ