ಮಹಾಮೈತ್ರಿಯಿಂದ ಎಸ್ ಪಿ ಹೊರಬಂದ್ದಿದೇಕೆ: ಸಿಪಿಐ ಪ್ರಶ್ನೆ

ಬಿಹಾರ ಮಹಾ ಮೈತ್ರಿಯಿಂದ ಇದ್ದಕ್ಕಿದ್ದಂತೆ ಹೊರ ಬಂದ್ದಿದ್ದು ಏಕೆ ಎಂದು ಸಿಪಿಐ ಪ್ರಶ್ನಿಸಿದೆ. ....
ಡಿ.ರಾಜಾ ಮತ್ತು ಮುಲಾಯಂ ಸಿಂಗ್ ಯಾದವ್
ಡಿ.ರಾಜಾ ಮತ್ತು ಮುಲಾಯಂ ಸಿಂಗ್ ಯಾದವ್

ನವದೆಹಲಿ: ಬಿಹಾರ ಮಹಾ ಮೈತ್ರಿಯಿಂದ ಇದ್ದಕ್ಕಿದ್ದಂತೆ  ಹೊರ ಬಂದ್ದಿದ್ದು ಏಕೆ ಎಂದು ಸಿಪಿಐ ಪ್ರಶ್ನಿಸಿದೆ. ಈ ಸಂಬಂಧ ಸಮಾಜವಾದಿ ಪಕ್ಷದ ಸರ್ವೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ಸ್ಪಷ್ಟನೆ ನೀಡುವಂತೆ ಸಿಪಿಐ ಮುಖ್ಯಸ್ಥ ಡಿ.ರಾಜಾ ಆಗ್ರಹಿಸಿದ್ದಾರೆ.

ಬಿಹಾರ ಚುನಾವಣೆಗೂ ಮುನ್ನವೇ ಸಮಾಜವಾದಿ ಪಕ್ಷ ತನ್ನ ದಿಕ್ಕು ಬದಲಿಸಿದ್ದು,  ಎನ್ಸಿಪಿ ಕೂಡ ಇಂಥಹುದ್ದೇ ಪರಿಸ್ಥಿತಿ ಎದುರಿಸುತ್ತಿದೆ ಎಂದರು. ಬಿಹಾರ ಚುನಾವಣೆಯಲ್ಲಿ ಈ ಮೈತ್ರಿ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುತ್ತವೆಯೋ ಇಲ್ಲ ಪ್ರತ್ಯೇಕವಾಗಿ ಸ್ಪರ್ಧಿಸುತ್ತವೆ ಎಂಬುದನ್ನು ಕಾದು ನೋಡಬೇಕು ಎಂದರು.

ಎಸ್ ಪಿ ಮಹಾಮೈತ್ರಿಯಿಂದ ಹೊರಬಂದು ಎಲ್ಲರಿಗೂ ಆಘಾತ ನೀಡಿದೆ. ಮೈತ್ರಿಯಿಂದ ಹೊರಬರಲು ಕಾರಣವೇನು ಎಂಬುದನ್ನು ಜನತೆಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com