ಎಥನಾಲ್ ಉತ್ಪಾದಿಸಲು ಅನುಮತಿ

ಪರಿಸರವನ್ನು ಹಸಿರು, ಶುದ್ದ ಮತ್ತು ನೈರ್ಮಲ್ಯಮುಕ್ತಗೊಳಿಸಲು ಪಂಜಾಬ್‍ನ ರೈತರಿಗೆ ಶೀಘ್ರದಲ್ಲಿ ಮೆಕ್ಕೆಜೋಳದಿಂದ ಎಥನಾಲ್ ಉತ್ಪಾದಿಸಲು ಅವಕಾಶ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಎಥೆನಾಲ್ ಉತ್ಪಾದನೆ (ಸಂಗ್ರಹ ಚಿತ್ರ)
ಎಥೆನಾಲ್ ಉತ್ಪಾದನೆ (ಸಂಗ್ರಹ ಚಿತ್ರ)

ಚಂಡೀಗಢ: ಪರಿಸರವನ್ನು ಹಸಿರು, ಶುದ್ದ ಮತ್ತು ನೈರ್ಮಲ್ಯಮುಕ್ತಗೊಳಿಸಲು ಪಂಜಾಬ್‍ನ ರೈತರಿಗೆ ಶೀಘ್ರದಲ್ಲಿ ಮೆಕ್ಕೆಜೋಳದಿಂದ ಎಥನಾಲ್ ಉತ್ಪಾದಿಸಲು ಅವಕಾಶ ನೀಡಲಾಗುವುದು  ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಪಂಜಾಬ್ ಅತಿಹೆಚ್ಚು ಮೆಕ್ಕೆಜೋಳ ಉತ್ಪಾದಿಸುವ ರಾಜ್ಯವಾಗಿರುವುದರಿಂದ ಹೊಸ ತಂತ್ರಜ್ಞಾನ ಬಳಸಿ ಎಥನಾಲ್ ಉತ್ಪಾದಿಸುವ ಈ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಂತೆ ಈಗಾಗಲೆ ಕೆಲವು ಹೆಸರಾಂತ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿದ್ದು ಕಡಿಮೆ ದರದಲ್ಲಿ ತಂತ್ರಜ್ಞಾನ ನೀಡುವಂತೆ ಸೂಚಿಸಲಾಗಿದೆ.  ಮೌಲ್ಯವರ್ಧನೆ ಮೂಲಕ ರೈತರು ಹೆಚ್ಚು ಆದಾಯಗಳಿಸುವಂತಾಗಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com