ತೀಸ್ತಾ ಟ್ರಸ್ಟ್ ನ ನೋಂದಣಿ ರದ್ದು

ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ಸಬ್ರಾಂಗ್ ಟ್ರಸ್ಟ್ ನ ನೋಂದಣಿಯನ್ನು 180 ದಿನ(6 ತಿಂಗಳು)ಗಳವರೆಗೆ ರದ್ದು ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ...
ತೀಸ್ತ ಸೇಟಲ್ವಾಡ್ (ಸಂಗ್ರಹ ಚಿತ್ರ)
ತೀಸ್ತ ಸೇಟಲ್ವಾಡ್ (ಸಂಗ್ರಹ ಚಿತ್ರ)

ನವದೆಹಲಿ: ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ಸಬ್ರಾಂಗ್ ಟ್ರಸ್ಟ್ ನ ನೋಂದಣಿಯನ್ನು 180 ದಿನ(6 ತಿಂಗಳು)ಗಳವರೆಗೆ ರದ್ದು ಮಾಡಿ ಕೇಂದ್ರ  ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ವಿದೇಶಿ ಹಣಕಾಸು ನೆರವು(ನಿಯಂತ್ರಣ) ಕಾಯ್ದೆ(ಎಫ್  ಸಿಆರ್‍ಎ)ಯ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಎಫ್ ಸಿಆರ್‍ಎ  ಕಾಯ್ದೆಯಡಿ ಸಬ್ರಾಂಗ್ ಟ್ರಸ್ಟ್ ಗೆ ನೀಡಲಾದ ಅಧಿಕಾರವನ್ನು ರದ್ದು ಮಾಡಲಾಗಿದ್ದು, ಸೆ.10ರಿಂದಲೇ ಇದು ಅನ್ವಯವಾಗಲಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಇದೇ ವೇಳೆ, ತೀಸ್ತಾ  ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ವಿಸ್ತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com