2 ನದಿಗಳ ಸಮ್ಮಿಲನಕ್ಕೆ ದಿನಗಣನೆ

ಕೃಷ್ಣಾ-ಗೋದಾವರಿ ನದಿ ಜೋಡಣೆ ಕನಸು ನನಸಾಗಲು ಇನ್ನಿರುವುದು ನಾಲ್ಕೇ ದಿನ. ಈಗಾಗಲೇ 124 ಕಿ.ಮೀ. ಹರಿದು ಬಂದಿರುವ ಆಂಧ್ರದ ಗೋದಾವರಿ ನದಿಯ...
ಕೃಷ್ಣಾ-ಗೋದಾವರಿ ನದಿ ಜೋಡಣೆ
ಕೃಷ್ಣಾ-ಗೋದಾವರಿ ನದಿ ಜೋಡಣೆ

ನವದೆಹಲಿ:  ಕೃಷ್ಣಾ-ಗೋದಾವರಿ ನದಿ ಜೋಡಣೆ ಕನಸು  ನನಸಾಗಲು ಇನ್ನಿರುವುದು ನಾಲ್ಕೇ ದಿನ. ಈಗಾಗಲೇ 124 ಕಿ.ಮೀ. ಹರಿದು ಬಂದಿರುವ ಆಂಧ್ರದ ಗೋದಾವರಿ ನದಿಯ ನೀರು ಇನ್ನು 50 ಕಿ.ಮೀ. ದೂರ ಸಾಗಿ, ಮುಂದಿನ ಬುಧವಾರ (ಸೆ.16) ಕೃಷ್ಣಾ ನದಿ ಮುಖಜಭೂಮಿಯನ್ನು ತಲುಪಲಿದೆ. ಅದರೊಂದಿಗೆ ನದಿ ಜೋಡಣೆಯ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದಂತಾಗಲಿದೆ. ಇದು ಮಹಾನದಿ- ಗೋದಾವರಿ- ಕೃಷ್ಣಾ- ಪೆನ್ನಾರ್ -ಕಾವೇರಿ- ವೈಗಾಯ್  ನದಿ ಜೋಡಣೆಯ ಭಾಗವಾಗಿದ್ದು, 30 ನದಿಗಳ ಜೋಡಣೆ ಪ್ರಾಜೆಕ್ಟ್ ಗಳಲ್ಲಿ ಒಂದಾಗಿದೆ. ಇದರಲ್ಲಿ ನಮ್ಮ ಕಾವೇರಿಯೂ ಸೇರಿದ್ದಾಳೆ.

ಗೋದಾವರಿ-ಕೃಷ್ಣಾ ಲಿಂಕ್: ಪ್ರತಿ ವರ್ಷವೂ ಗೋದಾವರಿ ಪ್ರವಾಹದ 3 ಸಾವಿರ ಟಿಎಂಸಿ ನೀರು ಬಂಗಾಳಕೊಲ್ಲಿಗೆ ಹರಿದುಹೋಗುತ್ತಿತ್ತು. ಈ ಪೈಕಿ ಶೇ.10ರಷ್ಟನ್ನಾದರೂ ಕೃಷ್ಣಾ ಮುಖಜ ಭೂಮಿಗೆ ಹರಿಸಿಕೊಳ್ಳುವುದು ಆಂಧ್ರ ಸರ್ಕಾರದ ಒತ್ತಾಸೆಯಾಗಿತ್ತು. ಹೀಗಾಗಿ ಪಟ್ಟಿಸೀಮಾ ಏತ ನೀರಾವರಿ ಯೋಜನೆಯಿಂದ ಗೋದಾವರಿ ನೀರನ್ನು ಬೇರೆ ಕಡೆಗೆ ತಿರುಗಿಸಿ, ಕೃಷ್ಣಾ ನದಿಗೆ ಸೇರುವಂತೆ ಮಾಡಲಾಗುತ್ತಿದೆ. ಸೆ.16ರಿಂದ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ ಎಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.

ಪಟ್ಟಿಸೀಮಾ ಯೋಜನೆ: ಮುಂದಿನ ವರ್ಷ 4,611 ಎಚ್‍ಪಿ ಸಾಮರ್ಥ್ಯದ 24 ಟರ್ಬೈನ್ ಪಂಪ್ ಮೂಲಕ ಗೋದಾವರಿ ನೀರನ್ನು ಮೇಲಕ್ಕೆತ್ತಿ ಪೊಲಾವರಂ ಕಾಲುವೆಗೆ ಬಿಡಲಾಗುತ



ಲಾಭವೇನು?

-ಗೋದಾವರಿಯ 80 ಟಿಎಂಸಿ ನೀರಿನ ಪೈಕಿ 10 ಟಿಎಂಸಿಯನ್ನು ಕೃಷ್ಣಾ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯ ಮನೆಬಳಕೆ ಮತ್ತು ಕೈಗಾರಿಕೆಗಳಿಗೆ ಒದಗಿಸಲಾಗುತ್ತದೆ.
-ಉಳಿದ 70 ಟಿಎಂಸಿಯನ್ನು ಇದೇ ಜಿಲ್ಲೆಗಳ ನೀರಾವರಿಗೆ ಬಳಸಲಾಗುತ್ತದೆ. ಈ ಮೂಲಕ 7 ಲಕ್ಷ ಎಕರೆ ಬತ್ತದ ಗದ್ದೆಗೆ ನೀರು ಸಿಕ್ಕಿದಂತಾಗುತ್ತದೆ.
- ಕೃಷ್ಣಾ ನದಿಯಿಂದ ನೀರು ಪೂರೈಕೆ ಮಾಡಬೇಕಾದ ಒತ್ತಡ ಕಡಿಮೆಯಾಗುತ್ತದೆ. ಹಾಗಾಗಿ, ಕೃಷ್ಣಾ ನದಿಯ ನೀರನ್ನು ಶ್ರೀಶೈಲಂ ಅಣೆಕಟ್ಟಿನಲ್ಲಿ ಸಂರಕ್ಷಿಸಿಡಬಹುದು.
ನಂತರ ಇದನ್ನು ಬರಪೀಡಿತ ರಾಯಲಸೀಮಾ ಪ್ರದೇಶಕ್ಕೆ ಪೂರೈಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com