
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಇ-ತೊಯಿಬಾ ಉಗ್ರ ಸಂಘಟನೆ ಕಮಾಂಡರ್ ಇರ್ಷಾದ್ ಗನಿಯನ್ನು ಹತ್ಯೆ ಮಾಡಲಾಗಿದೆ.
8 ಸೇನಾ ಸಿಬ್ಬಂದಿ ಸಾವಿಗೆ ಕಾರಣವಾಗಿದ್ದ 2013ರ ಹೈದರ್‌ಪೊರಾ ದಾಳಿಯ ಪ್ರಮುಖ ರೂವಾರಿ ಇರ್ಷಾದ್ ತಲೆಗೆ ಸರ್ಕಾರ 10 ಲಕ್ಷ ರುಪಾಯಿ ಘೋಷಿಸಿತ್ತು. ಕಡೆಗೂ ಪಾತಕಿಯನ್ನು ಹತ್ಯೆ ಮಾಡುವಲ್ಲಿ ಇಂದು ಪೊಲೀಸರು ಹಾಗೂ ಸೇನಾ ಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಹೈದರ್‌ಪೊರಾ ದಾಳಿ ಸೇರಿದಂತೆ ಸೇನೆ ಹಾಗೂ ಪೊಲೀಸರ ಮೇಲೆ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಇರ್ಷಾದ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಖಚಿತ ಮಾಹಿತಿ ಮೇರೆಗೆ ಕಕಪೊರಾ ಪ್ರದೇಶದ ಬೇಗಂ ಬಾಘ್‌ನಲ್ಲಿ ಪೊಲೀಸರು ಹಾಗೂ ಸೇನಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಮೊಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿರುವ ಇರ್ಷಾದ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement