ಭಾರತೀಯ ನಾವಿಕರು (ಸಾಂದರ್ಭಿಕ ಚಿತ್ರ)
ಭಾರತೀಯ ನಾವಿಕರು (ಸಾಂದರ್ಭಿಕ ಚಿತ್ರ)

ಹಿಂಸಾಚಾರ ಪೀಡಿತ ಯೆಮೆನ್ ನಲ್ಲಿ ಅಪಾಯಕ್ಕೆ ಸಿಲುಕಿರುವ 70 ಭಾರತೀಯ ನಾವಿಕರು..!

ಆಂತರಿಕ ಹಿಂಸಾಚಾರದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸುಮಾರು ಭಾರತೀಯ ನಾವಿಕರು ಅಪಾಯಕ್ಕೆ ಸಿಲುಕಿದ್ದು, ಅವರ ರಕ್ಷಣೆಗಾಗಿ ನಾವಿಕರ ಕುಟುಂಬಸ್ಥರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ...

ನವದೆಹಲಿ: ಆಂತರಿಕ ಹಿಂಸಾಚಾರದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸುಮಾರು ಭಾರತೀಯ ನಾವಿಕರು ಅಪಾಯಕ್ಕೆ ಸಿಲುಕಿದ್ದು, ಅವರ ರಕ್ಷಣೆಗಾಗಿ ನಾವಿಕರ ಕುಟುಂಬಸ್ಥರು ಕೇಂದ್ರ  ಸರ್ಕಾರದ ಮೊರೆ ಹೋಗಿದ್ದಾರೆ.

ಮೂಲಗಳ ಪ್ರಕಾರ ಈ ಎಲ್ಲ 70 ನಾವಿಕರು ಗುಜರಾತ್ ರಾಜ್ಯದ ಮೂಲದವರೆಂದು ತಿಳಿದುಬಂದಿದ್ದು, ಕಳೆದ 15 ದಿನಗಳಿಂದಲೂ ಯೆಮೆನ್ ನಲ್ಲಿ ನಿರಾಶ್ರಿತರಾಗಿದ್ದಾರೆ ಎಂದು ತಿಳಿದುಬಂದಿದೆ.  ಹಿಂಸಾಚಾರ ಪೀಡಿತ ಯೆಮೆನ್ ನಲ್ಲಿ ಸೌದಿ ಪಡೆಗಳು ವಾಯು ದಾಳಿ ನಡೆಸುತ್ತಿದ್ದು, ಇದೀಗ ಈ 70 ಭಾರತೀಯ ನಾವಿಕರು ಅಪಾಯಕ್ಕೆ ಸಿಲುಕಿದ್ದಾರೆ. ನಾವಿಕರಿಂದ ಬಂದ ಮಾಹಿತಿಯ ಪ್ರಕಾರ  ಈ ಎಲ್ಲ ನಾವಿಕರು ಗುಜರಾತ್ ನ ಕಚ್ ನ ಮಾಂಡವಿ, ಜೊಡಿಯಾ, ಸಾಲಯಾ ಮತ್ತು ಜಾಮ್ನಾ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ.

ಪ್ರಸ್ತುತ ಈ 70 ನಾವಿಕರು ಉಳಿದುಕೊಂಡಿರುವ ಅಡಗು ತಾಣದ ಮೇಲೆ ದಾಳಿ ನಡೆಯುತ್ತಿದ್ದು, ಕೂಡಲೇ ಅವರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಬೇಕು ಎಂದು ಈ ನಾವಿಕರನ್ನು  ಸಂಪರ್ಕಿಸಿರುವ ವಹನ್ವತಾ ಅಸೋಷಿಯೇಷನ್ ಸಂಸ್ಥೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ನಾವಿಕರ ಮೇಲೆ ಪ್ರತ್ಯೇಕತಾವಾದಿಗಳು ಅಥವಾ ಸೌದಿ ಮಿತ್ರಪಡೆಯ ಸೈನಿಕರು ರಾಕೆಟ್  ಲಾಂಚರ್ ಮತ್ತು ವಾಯು ದಾಳಿ ನಡೆಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಇವರ ರಕ್ಷಣೆಗೆ ಮುಂದಾಗಬೇಕು ಎಂದು ವಹನ್ವತಾ ಅಸೋಸಿಯೇಷನ್  ಮನವಿ ಮಾಡಿಕೊಂಡಿದೆ.

ಸಿಕಂದರ್ ಕುಮಾರ್ ಎಂಬ ನಾವಿಕ ತಮ್ಮ ಮೊಬೈಲ್ ಮೂಲಕ ಆಡಿಯೋ ಸಂದೇಶವನ್ನು ರವಾನಿಸಿದ್ದು, ಸಂದೇಶದಲ್ಲಿ ಎಲ್ಲ 70 ನಾವಿಕರು ಅಪಾಯಕ್ಕೆ ಸಿಲುಕಿದ್ದಾರೆ ಎಂದು ತಮ್ಮ ಅಳಲು  ತೋಡಿಕೊಂಡಿದ್ದಾರೆ. ಒಟ್ಟು 7 ನೌಕೆಗಳಲ್ಲಿ 70 ನಾವಿಕರು ಯೆಮೆನ್ ಆಗಮಿಸಿದ್ದು, ಇದೀಗ ಎಲ್ಲ ನೌಕೆಗಳು ಮತ್ತು 70 ನಾವಿಕರು ಅಪಾಯಕ್ಕೆ ಸಿಲುಕ್ಕಿದ್ದೇವೆ. ಅಲ್ಲದೆ ಕೂಡಲೇ ತಮ್ಮನ್ನು ಸುರಕ್ಷಿತ  ಪ್ರದೇಶಗಳಿಗೆ ರವಾನಿಸದಿದ್ದರೆ, ತಮ್ಮ ಸಾವು ಖಂಡಿತ ಎಂದು ನೋವು ತೋಡಿಕೊಂಡಿದ್ದಾರೆ.

ನಾವಿಕರ ರಕ್ಷಣೆಗೆ ವಿದೇಶಾಂಗ ಇಲಾಖೆಯ ಸತತ ಪ್ರಯತ್ನ
ಇನ್ನು ಅತ್ತ ಹಿಂಸಾಚಾರ ಪೀಡಿತ ಯೆಮೆನ್ ನಲ್ಲಿ ಭಾರತೀಯ ನಾವಿಕರು ಅಪಾಯಕ್ಕೆ ಸಿಲುಕಿರುವ ವಿಚಾರ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿರುವ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಯೆಮೆನ್ ನಲ್ಲಿರುವ ರಾಯಭಾರ ಕಚೇರಿಯೊಂದಿಗೆ ಸತತ ಸಂಪರ್ಕದಲ್ಲಿದ್ದು, ನಾವಿಕರ ರಕ್ಷಣೆಗೆ ಕೈಗೊಳ್ಳಬೇಕಾದ ಅಂಶಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com