ಕಾಶ್ಮೀರದಲ್ಲಿ ಬೀಫ್ ಪಾರ್ಟಿ ಮಾಡಲು ಮುಂದಾದ ಬಿಜೆಪಿ ನಾಯಕ

ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಗೋಮಾಂಸ ನಿಷೇಧಿಸಿರುವ ಮಧ್ಯಯೇ ಇದೀಗ ಕಾಶ್ಮೀರದಲ್ಲಿ ಮುಸ್ಲಿಮರಿಗೆ ಬೀಫ್ ಪಾರ್ಟಿ ಮಾಡಲು ಬಿಜೆಪಿ ನಾಯಕರೊಬ್ಬರು ಮುಂದಾಗಿರುವುದು ಹಲವು ವಿರೋಧಗಳಿಗೆ ಕಾರಣವಾಗಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಶ್ರೀನಗರ: ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಗೋಮಾಂಸ ನಿಷೇಧಿಸಿರುವ ಮಧ್ಯಯೇ ಇದೀಗ ಕಾಶ್ಮೀರದಲ್ಲಿ ಮುಸ್ಲಿಮರಿಗೆ ಬೀಫ್ ಪಾರ್ಟಿ ಮಾಡಲು ಬಿಜೆಪಿ ನಾಯಕರೊಬ್ಬರು ಮುಂದಾಗಿರುವುದು ಹಲವು ವಿರೋಧಗಳಿಗೆ ಕಾರಣವಾಗಿದೆ.

ದಕ್ಷಿಣ ಕಾಶ್ಮೀರದ ಬಿಜೆಪಿ ಮುಖಂಡ ಖುರ್ಶಿದ್ ಅಹ್ಮದ್ ಮಲಿಕ್ ಈ ಬೀಫ್ ಪಾರ್ಟಿಯೊಂದನ್ನು ಏರ್ಪಡಿಸಿದ್ದಾರೆಂದು ಎಂದು ತಿಳಿದುಬಂದಿದೆ.

ಬೀಫ್ ಪಾರ್ಟಿ ಕುರಿತಂತೆ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿರುವ ಖುರ್ಶಿದ್ ಅಹ್ಮದ್ ಮಲಿಕ್ ಅವರು, ಧಾರ್ಮಿಕ ಸಹಿಷ್ಣುತೆಯ ಸಂದೇಶ ಸಾರುವುದು ನಮ್ಮ ಪಕ್ಷದ ಸಂದೇಶವಾಗಿದೆ. ಹೀಗಾಗಿ ಹಿಂದೂ ಮತ್ತು ಮುಸ್ಲಿಮರಿಗೆ ಪಾರ್ಟಿಯೊಂದನ್ನು ಆಯೋಜಿಸಲಾಗಿದೆ. ಪಾರ್ಟಿಯಲ್ಲಿ ಮುಸ್ಲಿಮರಿಗೆ ದನದ ಮಾಂಸದ ಊಟ ಹಾಗೂ ಹಿಂದೂಗಳಿಗೆ ಸಸ್ಯಹಾರಿ ಊಟವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com