ಜಬುವಾ ದುರಂತ:ತನಿಖಾ ಸಮಿತಿ ರಚಿಸಿದ ಮಧ್ಯಪ್ರದೇಶ ಸರ್ಕಾರ

ಎಂಭತ್ತೆಂಟು ಮಂದಿ ಸಾವನ್ನಪ್ಪಿದ ಜಬುವಾ ಸ್ಪೋಟ ಪ್ರಕರಣದ ಬಗ್ಗೆ ತನಿಖೆ ನಡೆಸಲು ಅಲ್ಲಿನ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ...
ಜಬುವಾ ಸ್ಪೋಟದ ನಂತರದ ದೃಶ್ಯ
ಜಬುವಾ ಸ್ಪೋಟದ ನಂತರದ ದೃಶ್ಯ

ಜಬುವಾ:ಎಂಭತ್ತೆಂಟು ಮಂದಿ ಸಾವನ್ನಪ್ಪಿದ ಜಬುವಾ ಸ್ಪೋಟ ಪ್ರಕರಣದ ಬಗ್ಗೆ ತನಿಖೆ ನಡೆಸಲು ಅಲ್ಲಿನ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಆರ್ಯೇಂದ್ರ ಕುಮಾರ್ ಸಕ್ಸೇನಾ ನೇತೃತ್ವದಲ್ಲಿ ಏಕ ಸದಸ್ಯ ತನಿಖಾ ಸಮಿತಿಯನ್ನು ಮಧ್ಯಪ್ರದೇಶ ಸರ್ಕಾರ ರಚಿಸಿದೆ.ಈ ಕುರಿತು ಮಧ್ಯ ಪ್ರದೇಶ ಸರ್ಕಾರ ಕಳೆದ ರಾತ್ರಿ ಅಧಿಕೃತ ಆದೇಶ ಹೊರಡಿಸಿದ್ದು, ಸಮಿತಿ ಇನ್ನು ಮೂರು ತಿಂಗಳಲ್ಲಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಪೆಟ್ಲವಾಡ್ ಎಂಬಲ್ಲಿ ಕಳೆದ ಶನಿವಾರ ಚಹಾ ಅಂಗಡಿಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡಿತು. ನಂತರ ಪಕ್ಕದ ಮನೆಯೊಂದರಲ್ಲಿ ಸ್ಪೋಟಕ ಸಿಡಿದು ಸುಮಾರು 80 ಮಂದಿ ಸಾವನ್ನಪ್ಪಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ತನಿಖಾ ಸಮಿತಿಯು ಸ್ಪೋಟ ನಡೆದ ಸ್ಥಳದಲ್ಲಿನ ಆಗಿನ ಪರಿಸ್ಥಿತಿ,ಯಾರು ಕಾರಣರು ಮತ್ತು ಸ್ಪೋಟವುಂಟಾದ ಮನೆಯ ಮಾಲೀಕರು ಅಥವಾ ಬಾಡಿಗೆದಾರರು ಸ್ಪೋಟಕವನ್ನಿಟ್ಟುಕೊಳ್ಳಲು ಅನುಮತಿ ಹೊಂದಿದ್ದರೇ ಎಂಬ ಬಗ್ಗೆ ಸಹ ತನಿಖೆ ನಡೆಸಲಿದೆ. ಮನೆಯಲ್ಲಿ ಸ್ಪೋಟಕವನ್ನಿಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಯಾರಾದರೂ ದೂರು ನೀಡಿದ್ದರೇ ಮತ್ತು ಅವರ ವಿರುದ್ಧ ಕ್ರಮ ಕೈಗೊಂಡಿದ್ದರೆ ಎಂಬ ಬಗ್ಗೆ ಕೂಡ ಸರ್ಕಾರ ರಚಿಸಿರುವ ಸಮಿತಿ ತನಿಖೆ ಕೈಗೊಂಡಿದೆ.

ಸ್ಪೋಟದ ಪ್ರಮುಖ ಆರೋಪಿ ರಾಜೇಂದ್ರ ಕಸ್ವಾ ಬಗ್ಗೆ ಮಾಹಿತಿ ನೀಡಿದವರಿಗೆ ರಾಜ್ಯ ಸರ್ಕಾರ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com