

ನವದೆಹಲಿ: ದಿವಂಗತ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಮುಸ್ಲಿಂ "ಆಗಿದ್ದರೂ", ಮಹಾನ್ ರಾಷ್ಟ್ರೀಯವಾದಿಯಾಗಿದ್ದರು ಎಂದು ಹೇಳುವ ಮೂಲಕ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ವಿವಾದ ಸೃಷ್ಟಿಸಿದ್ದಾರೆ.
ದೇಶವನ್ನು "ಸಾಂಸ್ಕೃತಿಕ ಮಾಲಿನ್ಯದಿಂದ" ಮುಕ್ತಗೊಳಿಸಬೇಕು ಮತ್ತು ರಾಮಾಯಣ, ಮಹಾಭಾರತಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿದೆ ಎಂದು ಕೂಡ ಇತ್ತೀಚೆಗೆ ಮಹೇಶ್ ಶರ್ಮಾ ಹೇಳಿರುವುದು ವಿವಾದಕ್ಕೆ ಕಾರಣವಾಗಿತ್ತು.
ಔರಂಗಜೇಬ ರಸ್ತೆಗೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಿದ್ದೇವೆ. ಕಲಾಂ ಅವರು ಮುಸ್ಲಿಂ ಆಗಿದ್ದ ಹೊರತಾಗಿಯೂ, ಮಹಾನ್ ರಾಷ್ಟ್ರೀಯವಾದಿಯಾಗಿದ್ದರು" ಎಂದು ಸಚಿವರು ಚಾನೆಲ್ ಒಂದರಲ್ಲಿ ಹೇಳಿರುವ ವಿಷಯ ದೇಶದ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದಾರೆ.