ಗುಜರಾತ್ ಕರಾವಳಿಯಲ್ಲಿ ಭಾರತೀಯ ಮೀನುಗಾರನ ಮೇಲೆ ಗುಂಡಿನ ದಾಳಿ

ಗುಜರಾತ್ ನಲ್ಲಿರುವ ಇಂಡೋ-ಪಾಕ್ ಅಂತಾರಾಷ್ಟ್ರೀಯ ಕರಾವಳಿ ಪ್ರದೇಶದಲ್ಲಿ ಭಾರತೀಯ ಮೀನುಗಾರನೋರ್ವ ಗುಂಡಿನ ದಾಳಿಗೆ ಬಲಿಯಾಗಿದ್ದು, ಪಾಕಿಸ್ತಾನ ನೌಕಾದಳದ ಸಿಬ್ಬಂದಿಗಳು ಗುಂಡಿನ ದಾಳಿ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ...
ಗುಜರಾತ್ ಕರಾವಳಿ ಪ್ರದೇಶ (ಸಂಗ್ರಹ ಚಿತ್ರ)
ಗುಜರಾತ್ ಕರಾವಳಿ ಪ್ರದೇಶ (ಸಂಗ್ರಹ ಚಿತ್ರ)

ಅಹ್ಮದಾಬಾದ್: ಗುಜರಾತ್ ನಲ್ಲಿರುವ ಇಂಡೋ-ಪಾಕ್ ಅಂತಾರಾಷ್ಟ್ರೀಯ ಕರಾವಳಿ ಪ್ರದೇಶದಲ್ಲಿ ಭಾರತೀಯ ಮೀನುಗಾರನೋರ್ವ ಗುಂಡಿನ ದಾಳಿಗೆ ಬಲಿಯಾಗಿದ್ದು, ಪಾಕಿಸ್ತಾನ ನೌಕಾದಳದ ಸಿಬ್ಬಂದಿಗಳು  ಗುಂಡಿನ ದಾಳಿ ನಡೆಸಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ.

ಗುಜರಾತ್ ನ ದ್ವಾರಕ ಕರಾವಳಿ ಪ್ರದೇಶದಲ್ಲಿ ಪಾಕಿಸ್ತಾನಿ ನೌಕಾದಳದ ಪಡೆಗಳು ಭಾರತೀಯ ಮೀನುಗಾರಿಕಾ ಬೋಟ್ ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಮೀನುಗಾರು ಸಾವನ್ನಪ್ಪಿದ್ದಾನೆ  ಎಂದು ತಿಳಿದುಬಂದಿದೆ. ಮೃತ ಮೀನುಗಾರನನ್ನು ಇಕ್ಬಾಲ್ ಗುರುತಿಸಲಾಗಿದೆ. ಒಟ್ಟು ಎರಡು ಬೋಟ್ ಗಳ ಮೇಲೆ ಪಾಕಿಸ್ತಾನ ನೌಕಾಪಡೆ ಗುಂಡಿನ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಘಟನಾ ಸ್ಥಳಕ್ಕೆ  ಭಾರತೀಯ ನೌಕಾಪಡೆಯ ಅಧಿಕಾರಿಗಳು ದೌಡಾಯಿಸಿದ್ದಾರೆ.

ಪ್ರೇಮ್ ಜೀ ಎಂಬ ಬೋಟ್  ಮೇಲೆ ಪಾಕಿಸ್ತಾನ ನೌಕಾಪಡೆಯ ಸಿಬ್ಬಂದಿಗಳು ಗುಂಡಿನ ದಾಳಿ ನಡೆದಿದ್ದು, ಬೋಟ್ ನಲ್ಲಿದ್ದ ಇಕ್ಬಾಲ್ ಎಂಬ ಮೀನುಗಾರ ಸಾವಿಗೀಡಾಗಿದ್ದಾನೆ. ಬೋಟ್ ನಲ್ಲಿ ಒಟ್ಟು ಐದು ಮಂದಿ  ಮೀನುಗಾರರು ಇದ್ದರು ಎಂದು ತಿಳಿದುಬಂದಿದೆ. ಇನ್ನು ಭಾರತೀಯ ಮೀನುಗಾರರು ಪಾಕಿಸ್ತಾನಕ್ಕೆ ಸೇರಿದ ಗಡಿ ಪ್ರದೇಶಕ್ಕೆ ಅಕ್ರಮವಾಗಿ ಬಂದಿದ್ದರೂ ಅವರನ್ನು ಬಂಧಿಸಿ ವಿಚಾರಣೆ ನಡೆಸಬಹುದಿತ್ತು. ಆದರೆ  ಏಕಾಏಕಿ ಗುಂಡಿನ ದಾಳಿ ನಡೆಸುವ ಅಗತ್ಯವಿರಲಿಲ್ಲ. ಹೀಗಾಗಿ ಭಾರತೀಯ ನೌಕಾಪಡೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಹೆಚ್ಚಿನ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಮತ್ತೊಂದು ಮೂಲಗಳ ಪ್ರಕಾರ ಪಾಕಿಸ್ತಾನ ನೌಕಾಪಡೆಯ ಸಿಬ್ಬಂದಿಗಳೇ ಅಕ್ರಮವಾಗಿ ಅಂತಾರಾಷ್ಟ್ರೀಯ ಕರಾವಳಿ ಪ್ರದೇಶವನ್ನು ಪ್ರವೇಶಿಸಿ ಭಾರತೀಯ ಮೀನುಗಾರಿಕಾ ಬೋಟ್ ಗಳ ಮೇಲೆ ಗುಂಡಿನ ದಾಳಿ  ನಡೆಸಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದ್ದು, ತನಿಖೆಯ ಬಳಿಕವಷ್ಟೇ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com