ಫೇಸ್ ಬುಕ್ ಗೆಳತಿಯಿಂದ 21 ಲಕ್ಷ ಹಣ ಕಳೆದುಕೊಂಡ ಉದ್ಯಮಿ

ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳತಿಯ ಮಾತುಗಳಿಗೆ ಮರುಳಾಗಿ ಮುಂಬೈನ ಉದ್ಯಮಿಯೊಬ್ಬ ಬರೋಬ್ಬರಿ 21 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ ಅಲ್ಲಿಯ ವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತು ಸರ್ವಕಾಲಕ್ಕೂ ಸತ್ಯವಾದದ್ದು.

ಫೇಸ್ ಬುಕ್ ನಲ್ಲಿ ಪರಿಚಯವಾದ ಗೆಳತಿಯ ಮಾತುಗಳಿಗೆ ಮರುಳಾಗಿ ಮುಂಬೈನ ಉದ್ಯಮಿಯೊಬ್ಬ  45 ದಿನಗಳಲ್ಲಿ ಬರೋಬ್ಬರಿ 21 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾನೆ. ಈತನ ನಂಬಿಕೆ ಗಳಿಸಿಕೊಂಡ ಆಕೆ ಮತ್ತೊಬ್ಬನ ಸಹಕಾರದೊಂದಿಗೆ ಹಂತ ಹಂತವಾಗಿ ಹಣ ಸುಲಿಗೆ ಮಾಡಿದ್ದಾಳೆ.

ತಾನು ಅಮೆರಿಕಾ ನಿವಾಸಿ ಎಂದು ಹೇಳಿಕೊಂ ಜೆನಿಫರ್ ಅಲೆಕ್ಸ್  ಎಂಬಾಕೆ ಈತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾಳೆ. ಬಳಿಕ ಆತನೊಂದಿಗೆ ಅತ್ಮೀಯವಾಗಿ ಚಾಟ್ ಮಾಡುತ್ತಿದ್ದಳು, ನಿಧಾನವಾಗಿ ತನ್ನ ವೈಯಕ್ತಿಕ ಸಮಸ್ಯೆಗಳನ್ನೂ ಹೇಳಿಕೊಂಡ ಆಕೆ ನಿಮ್ಮೊಂದಿಗೆ ಚಾಟ್ ಮಾಡುವಾಗ ನೀವು ನೀಡುವ ಸಮಾಧಾನದ ಮಾತುಗಳು ಚೇತರಿಕೆ ನೀಡುತ್ತವೆ ಎಂದೆಲ್ಲಾ ಹೇಳಿ ಆತನನ್ನು ನಂಬಿಸಿದ್ದಾಳೆ

ಅತ್ಮೀಯ ಸ್ನೇಹಿತರಾದ ನಿಮಗೆ ಗಿಫ್ಟ್ ಕಳಿಸಬೇಕೆನಿದೆ ಎಂದು ಹೇಳಿ ಎಟಿಎಂ ಕಾರ್ಡ್ ಒಂದನ್ನು ಪಿನ್ ವಿವರ ಸಹಿತ ಕಳಿಸಿದ್ದಾಳೆ. ಅದರ ಮೂಲಕ ಮುಂಬೈ ವ್ಯಕ್ತಿ 10 ಸಾವಿರ ರೂ. ಪಡೆದಿದ್ದು, ಅಮೆರಿಕಾದ ನಿವಾಸಿ ಎಂದು ಹೇಳಿಕೊಂಡಿದ್ದ ಜೆನ್ನಿಫರ್ ಅಲೆಕ್ಸ್ ಳನ್ನು ಪೂರ್ತಿಯಾಗಿ ನಂಬಿದ್ದಾನೆ. ನಂತರವೇ ಆಕೆ ತನ್ನ ಆಟ ಶುರು ಮಾಡಿದ್ದಾಳೆ.ನಿಮಗೆ ಭಾರೀ ಗಿಫ್ಟ್ ಕಳುಹಿಸುತ್ತಿರುವುದಾಗಿ ಹೇಳಿದ್ದಾಳೆ. ಅದಕ್ಕೆ ತಕ್ಕಂತೆ ಇಲ್ಲಿ ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡವನೊಬ್ಬ ನಿಮಗೆ ಪಾರ್ಸೆಲ್ ಬಂದಿದೆ ಅದನ್ನು ತಲುಪಿಸಲು ಸ್ವಲ್ಪ ಹಣ ಕಟ್ಟಬೇಕಾಗುತ್ತದೆಂದು ಹೇಳಿ ಹಂತ ಹಂತವಾಗಿ 21 ಲಕ್ಷ ರೂ. ಗಳನ್ನು ವಿವಿಧ ಖಾತೆಗಳಿಗೆ ಹಾಕಿಸಿಕೊಂಡಿದ್ದಾನೆ.

ಕೋಟ್ಯಾಂತರ ರೂ. ಮೌಲ್ಯದ ಗಿಫ್ಟ್ ಆಸೆಗೆ ಬಿದ್ದ ಮುಂಬೈ  ವ್ಯಕ್ತಿ21 ಲಕ್ಷ ರೂ. ಗಳನ್ನು ಪಾವತಿಸಿದ್ದಾನೆ. ಪಾರ್ಸೆಲ್ ಗಾಗಿ ಕಾದು ಕುಳಿತಿದ್ದಾನೆ.ಬಂತು ಬಳಿಕ ಜೆನ್ನಫರ್ ಅಲೆಕ್ಸ್ ಆಗಲಿ ಅಥವಾ ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದ ವ್ಯಕ್ತಿಯಾಗಲಿ ಈತನೊಂದಿಗೆ ಚಾಟ್ ಮಾಡುವುದಿರಲಿ ಮೇಲ್ ಕಳಿಸಿದರೂ ಉತ್ತರಿಸುವ ಗೋಜಿಗೂ ಹೋಗಿಲ್ಲ. ನಂತರ ಈತ ತಾನು ಮೋಸ ಹೋಗಿರುವುದಾಗಿ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com