ಶಾಲಾವೇಳೆಯೂ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬಿರುತ್ತದೆ

ಶಾಲಾವೇಳೆಗಳೂ ಕಲಿಯುವ ಮಕ್ಕಳ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಬ್ರಿಟಿಷ್ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಶಾಲಾವೇಳೆಗಳೂ ಕಲಿಯುವ ಮಕ್ಕಳ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಬ್ರಿಟಿಷ್ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಶಾಲೆಗಳು ಬೆಳಗ್ಗೆ ಬೇಗನೆ ಆರಂಭವಾಗುವುದರಿಂದ ಮಕ್ಕಳಿಗೆ ಸರಿಯಾದ ನಿದ್ದೆ ಸಿಕ್ಕಿರುವುದಿಲ್ಲ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
ಭಾನುವಾರ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ  ಆಕ್ಸ್‌ಫರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ಪೌಲ್ ಕೆಲ್ಲಿ, ಹಾರ್ವರ್ಡ್ ಯುನಿವರ್ಸಿಟಿಯಲ್ಲಿನ ಅಮೆರಿಕದ ವಿಜ್ಞಾನಿಗಳು ಸೇರಿ ಈ ರೀತಿಯ ಪರಿಣಾಮದ ಬಗ್ಗೆ ಸಂಶೋಧನೆ ನಡೆಸಿದ್ದಾರೆ.  10 ವರ್ಷದೊಳಗಿನ ಮಕ್ಕಳಿಗೆ ಬೆಳಗ್ಗೆ 8.30 ಅಥವಾ ಅದಕ್ಕಿಂತ ನಂತರ,  16 ರ ಹರೆಯದ ಮಕ್ಕಳಿಗೆ ಬೆಳಗ್ಗೆ 10.00 ಗಂಟೆಗೆ ಹಾಗೂ 18 ವರ್ಷದ ಮಕ್ಕಳಿಗೆ ಬೆಳಗ್ಗೆ 11 ಗಂಟೆ ಹೊತ್ತಲ್ಲಿ ಶಾಲೆ ಆರಂಭವಾಗಬೇಕಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಈ  ಬಗ್ಗೆ ಕಳೆದ ವರ್ಷವೇ ಕೆಲ್ಲಿ ಅವರು ಅಧ್ಯಯನ ವರದಿಯನ್ನು ಸಲ್ಲಿಸಿದ್ದು ಬ್ರಿಟನ್‌ನ ವಿದ್ಯಾರ್ಥಿಗಳು ಪ್ರತೀ ವಾರ ಕನಿಷ್ಠ 10 ಗಂಟೆಗಳ ಕಾಲದ ನಿದ್ದೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸೂರ್ಯೋದಯ ಆಗುವ ಮುನ್ನವೇ ಮಕ್ಕಳು ಎದ್ದೇಳುತ್ತಾರೆ. ಹೀಗಿರುವಾಗ ಭಾರತ ಮಕ್ಕಳಲ್ಲಿನ ಪರಿಣಾಮ ಮತ್ತು ವಿದೇಶದಲ್ಲಿನ ಮಕ್ಕಳ ಮೇಲಿನ ಪರಿಣಾಮಗಳು ವ್ಯತ್ಯಸ್ತವಾಗಿರುತ್ತವೆ ಎಂಬುದು ತಜ್ಞರ ಅಭಿಪ್ರಾಯ.
ತಜ್ಞರ ಪ್ರಕಾರ ಮಕ್ಕಳು ನಿದ್ದೆ ಮಾಡುವ ಅವಧಿ ಹೀಗಿರಬೇಕು
0-3 ತಿಂಗಳು:  14 -17 ಗಂಟೆ
4 -1 : 12- 15 ಗಂಟೆ
1 -2 : 11 -14 ಗಂಟೆ
ಪ್ರೀಸ್ಕೂಲ್‌ಗೆ ಹೋಗುವವರು: ( 3 -5)-   10- 13 ಗಂಟೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com