ಸದ್ಯ ಹೈಕೋರ್ಟ್‍ಗೆ ಸಿಗಲ್ಲ ಕಾಯಂ ಸಿಜೆ

ರಾಷ್ಟ್ರೀಯ ನ್ಯಾಯಾಂಗ ನೇಮಕಆಯೋಗ (ಎನ್‍ಜೆಎಸಿ) ಕೆಲಸ ಆರಂಭಿಸುವವರೆಗೂ ಕರ್ನಾಟಕ ಹೈಕೋರ್ಟ್‍ಗೆ ಕಾಯಂ...
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕಆಯೋಗ (ಎನ್‍ಜೆಎಸಿ) ಕೆಲಸ ಆರಂಭಿಸುವವರೆಗೂ ಕರ್ನಾಟಕ ಹೈಕೋರ್ಟ್‍ಗೆ ಕಾಯಂ ಮುಖ್ಯ ನ್ಯಾಯ-ಮೂರ್ತಿ ಸಿಗಲ್ಲ. ಅಲ್ಲಿವರೆಗೂ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳೇ ಅನಿವಾರ್ಯ!

ಹೌದು, ರಾಜ್ಯ ಹೈಕೋರ್ಟ್‍ಗೆ ಸದ್ಯ ಇದೇ ಸ್ಥಿತಿ. ಇದಕ್ಕೆ ಕಾರಣ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ದೇಶದಲ್ಲಿ ಯಾವುದೇ ವ್ಯವಸ್ಥೆಯೇ ಇಲ್ಲ! ಏಕೆಂದರೆ, ಇದ್ದ ಕೊಲಿಜಿಯಂ ಅನ್ನು ರದ್ದು ಮಾಡಲಾಗಿದ್ದು, ಹೊಸ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ ಕೆಲಸವನ್ನೇ ಶುರು ಮಾಡಿಲ್ಲ.

ಇದು ಕೇವಲ ಕರ್ನಾಟಕ ಹೈಕೋರ್ಟ್ ನ ಸ್ಥಿತಿಯಲ್ಲ, ಗುವಾಹಟಿ, ಗುಜರಾತ್, ಪಟನಾ, ಪಂಜಾಬ್ ಮತ್ತು ಹರ್ಯಾಣ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್‍ಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.ಈ ಎಲ್ಲ ಹೈಕೋರ್ಟ್‍ಗಳಲ್ಲೂ ಈಗ ಕೆಲಸ ಮಾಡುತ್ತಿರುವುದು ಹಂಗಾಮಿ ಮುಖ್ಯ ನ್ಯಾಯಮೂತಿರ್ ಗಳೇ. ಇದರ ಜತೆಗೆ ಬಾಂಬೆ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಶಾ ನಿವೃತ್ತಿಯಾದ ಮೇಲೂ ಅಲ್ಲಿಗೂ ಕಾಯಂ ನ್ಯಾಯ ಮೂರ್ತಿ ಸಿಕ್ಕಿಲ್ಲ.

ಆದರೆ ಈ ವಿಚಾರಗಳನ್ನು ಕಾನೂನು ಸಚಿವಾಲಯ ವರದಿಯಲ್ಲಿ ಸೇರಿಸಿಯೇ ಇಲ್ಲ. ಇದಕ್ಕೆಲ್ಲಾ ಕಾರಣ, ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವೆ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಸಂಬಂಧಿಸಿದ ಕಾನೂನು ಸಮರ. ಕಳೆದ ವರ್ಷವೇ ನ್ಯಾಯಮೂರ್ತಿಗಳ ನೇಮಕಕ್ಕಾಗಿ ಇದ್ದ ಕೊಲಿಜಿಯಂ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.

ಇದಕ್ಕೆ ಬದಲಾಗಿ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ರಚಿಸಿದೆ. ಇದರ ಅಸ್ತಿತ್ವದ ಕುರಿತಂತೆ ಸುಪ್ರೀಂ ವಿಚಾರಣೆ ನಡೆಸುತ್ತಿರುವುದರಿಂದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗಕ್ಕೆ ಕೆಲಸ ಶುರುಮಾಡುವುದು ಸಾಧ್ಯವಾಗಿಲ್ಲ.

ಹಂಗಾಮಿಗೆ ಬೇರೆ ಹಾದಿ: ವಿಚಿತ್ರವೆಂದರೆ ಕೇಂದ್ರ ಸರ್ಕಾರಕ್ಕಾಗಲಿ, ಸುಪ್ರೀಂ ಕೋರ್ಟ್‍ಗಾಗಲಿ ಹೈಕೋರ್ಟ್ ನ್ಯಾಯಮೂತಿರ್ ಗಳನ್ನು ಇನ್ನೊಂದು ಹೈಕೋಟ್ರ್ ಗೆ ವರ್ಗಾವಣೆ ಮಾಡುವ ಅಧಿಕಾರವೂ ಇಲ್ಲ. ಆದರೆ ಸಂವಿಧಾನದ 223 ವಿಧಿಯಲ್ಲಿ ಹೇಳಿರುವಂತೆ ಯಾವುದೇ ಕಾರಣಕ್ಕೂ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಖಾಲಿ ಬಿಡುವಂತಿಲ್ಲ.

ಅನಿವಾರ್ಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಅದೇ ಹುದ್ದೆಯಲ್ಲಿರುವ ಬೇರೆ ಹೈಕೋಟ್ರ್ ಗಳ ಜಡ್ಜ್‍ಗಳನ್ನು ಇನ್ನೊಂದು ಹೈಕೋಟ್ರ್ ಗೆ ನೇಮಿಸಬಹುದು. ಇದೇ ಅವಕಾಶವನ್ನು ಬಳಸಿಕೊಂಡ ಕೇಂದ್ರ ಸರ್ಕಾರ ಕರ್ನಾಟಕ ಸೇರಿದಂತೆ ಕೆಲ ಹೈಕೋರ್ಟ್‍ಗಳಿಗೆ ಹಂಗಾಮಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದೆ.

392ಕ್ಕೇರಿದ ಖಾಲಿ ಹುದ್ದೆ: ಪ್ರಸಕ್ತ ತಿಂಗಳ ಆರಂಭದಲ್ಲಿ ವಿವಿಧ ಹೈಕೋರ್ಟ್ ಗಳಲ್ಲಿ 8 ನ್ಯಾಯಮೂರ್ತಿಗಳು ನಿವೃತ್ತಿಯಾಗಿದ್ದಾರೆ. ಅಲ್ಲಿಗೆ ದೇಶದಲ್ಲಿ ಜಡ್ಜ್ ಗಳ ಕೊರತೆ ಸಂಖ್ಯೆ 384ರಿಂದ 392ಕ್ಕೆ ಏರಿಕೆಯಾಗಿದೆ. ವಿಚಿತ್ರವೆಂದರೆ, ಈ ಪ್ರಮಾಣದಲ್ಲಿ ನ್ಯಾಯಮೂರ್ತಿಗಳು ನಿವೃತ್ತಿಯಾಗುತ್ತಿದ್ದರೂ, ಇವರ ಸ್ಥಾನಕ್ಕೆ ಇನ್ನೊಬ್ಬರನ್ನು ನೇಮಿಸಲು ಸದ್ಯ ಸರ್ಕಾರ, ಸುಪ್ರೀಂ ಕೋರ್ಟ್ ಬಳಿ ಯಾವುದೇ ಮಾನದಂಡ ಇಲ್ಲ.

ಹೀಗಾಗಿ ಮುಂದಿನ ದಿನಗಳಲ್ಲಿ ಜಡ್ಜ್ ಗಳ ಕೊರತೆ ಭೀತಿ ಹೆಚ್ಚಾಗಲಿದೆಯೇ ಹೊರತು, ಕಡಿಮೆಯಾಗುವ ಸಂಭವಗಳಿಲ್ಲ. ಕಾನೂನು ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ 392 ನ್ಯಾಯಮೂರ್ತಿಗಳ ಕೊರತೆ ಇದೆ. ಅಂದರೆ ಇರಬೇಕಾದ ಜಡ್ಜ್ ಗಳ ಸಂಖ್ಯೆ 1,017. ಕೊರತೆ ಸಂಖ್ಯೆ ಆ.1ರ ಸುಮಾರಿಗೆ 383 ಇದ್ದರೆ, ಸೆ.1ರ ವೇಳೆಗೆ 392 ಆಘಿದೆ.

ಸದ್ಯ ದೇಶದ ಹೈಕೋರ್ಟ್ ಗಳಲ್ಲಿನ ನ್ಯಾಯಮೂರ್ತಿಗಳ ಸಂಖ್ಯೆ 651. ಒಟ್ಟು 24 ಹೈಕೋರ್ಟ್ ಗಳಲ್ಲಿ ಈ ಸಂಖ್ಯೆಯ ನ್ಯಾಯಮೂರ್ತಿಗಳು ಕೆಲಸ ಮಾಡುತ್ತಿದ್ದಾರೆ. ಈ ತಿಂಗಳು ರಾಜಸ್ಥಾನ ಹೈಕೋರ್ಟ್ ನಿಂದ ಇಬ್ಬರು, ಅಲಹಾಬಾದ್ ಕೊಲ್ಕತ್ತಾ, ಗುಜರಾತ್, ಕರ್ನಾಟಕ, ಕೇರಳ ಮತ್ತು ಪಾಟ್ನಾ ಹೈಕೋರ್ಟ್ ಗಳಿಂದ ತಲಾ ಒಬ್ಬರು ಜಡ್ಜ್ ಗಳು ನಿವೃತ್ತಿಯಾಗಿದ್ದಾರೆ.

ಬಾಂಬೆ ಹೈಕೋರ್ಟ್ ನಿಂದ ಸೆ.7ಕ್ಕೆ ನಿವೃತ್ತಿಯಾದ ಜಡ್ಜ್ ವೊಬ್ಬರ ಹೆಸರು ಸೇರ್ಪಡೆಯಾಗಿಲ್ಲ. ಸುಪ್ರೀಂ ಒಪ್ಪಿಗೆ ಪಡೆದು ಹೈಕೋರ್ಟ್ ಗಳಲ್ಲಿರುವ ಹೆಚ್ಚುವರಿ ಜಡ್ಜ್ ಗಳನ್ನು ಕೇಂದ್ರ ಸದ್ಯ ಇನ್ನೂ 2 ವರ್ಷ ಮುಂದುವರಿಸಿದೆ. ಆದರೆ ಹೆಚ್ಚುವರಿ ಜಡ್ಜ್‍ಗಳನ್ನು ಎನ್ ಜೆಎಸಿ ಬರುವವರೆಗೂ ಶಾಶ್ವತ ಜಡ್ಜ್‍ಗಳನ್ನಾಗಿ ಮಾಡುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com