ಅಮೆರಿಕದೊಂದಿಗೆ 3.1 ಬಿಲಿಯನ್ ಡಾಲರ್ ಹೆಲಿಕಾಪ್ಟರ್ ಒಪ್ಪಂದಕ್ಕೆ ಭಾರತ ಸಹಿ

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಭೇಟಿಗೆ ತೆರಳುವ ಮುನ್ನ ಸಚಿವ ಸಂಪುಟದ ಭದ್ರತಾ ಸಮಿತಿ (ಸಿಸಿಎಸ್) ಅಮೆರಿಕ ಜತೆ ...
ಅಪಾಚಿ ಹೆಲಿಕಾಪ್ಟರ್
ಅಪಾಚಿ ಹೆಲಿಕಾಪ್ಟರ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಭೇಟಿಗೆ ತೆರಳುವ ಮುನ್ನ ಸಚಿವ ಸಂಪುಟದ ಭದ್ರತಾ ಸಮಿತಿ (ಸಿಸಿಎಸ್) ಅಮೆರಿಕ ಜತೆ 3.1 ಬಿಲಿಯನ್ ಡಾಲರ್  ಹೆಲಿಕಾಪ್ಟರ್ ಒಪ್ಪಂದಕ್ಕೆ ಒಪ್ಪಿಗೆ ನೀಡಿದೆ.
ಮಂಗಳವಾರ ನಡೆದ ಸಭೆಯಲ್ಲಿ 22 ಅಪಾಚಿ ಅಟ್ಯಾಕ್ ಹೆಲಿಕಾಪ್ಟರ್ ಮತ್ತು 15 ಚಿನೂಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್‌ಗಳನ್ನು ಖರೀದಿಸುವುದಕ್ಕೆ ಅನುಮತಿ ನೀಡಲಾಗಿದೆ.
ಕೇಂದ್ರ ಸಂಪುಟ ಸಚಿವರ ಸಭೆಯ ನಂತರ ಸಿಸಿಎಸ್ ಸಭೆ ನಡೆದಿತ್ತು. ಈ ವರ್ಷ ಜೂನ್ ತಿಂಗಳಲ್ಲಿ  ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಭಾರತಕ್ಕೆ ಭೇಟಿ ನೀಡಿದಾಗ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.  ಹೊಚ್ಚ ಹೊಸ ತಾಂತ್ರಿಕ ಸೌಲಭ್ಯದಿಂದ ಕೂಡಿದ ಹೆಲಿಕಾಪ್ಟರ್ ಆಗಿದೆ ಅಪಾಚಿ. ಅಮೆರಿಕದೊಂದಿಗೆ ಇರುವ ಈ ಒಪ್ಪಂದದ ಜತೆಗೆ ರಡಾರ್, ಯುದ್ಧದ ವೇಳೆ ಬಳಸಲ್ಪಡುವ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನೂ ಖರೀದಿಸುವ ಬಗ್ಗೆ ಒಪ್ಪಂದವಾಗಿದೆ.
ಸಂಯುಕ್ತ ರಾಷ್ಟ್ರದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ನಾಳೆ (23 ಸೆಪ್ಟೆಂಬರ್) ಪ್ರಧಾನಿ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com