

ನವದೆಹಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಆಯೋಗ ಪಕ್ಷದ ಕೈಯಲ್ಲಿದೆ. ಹೀಗಾಗಿ, ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಏನು ಮಾಡಲು ಸಾಧ್ಯವಿಲ್ಲ ಎಂಬ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಜಾಯ್ ಬ್ಯಾನರ್ಜಿ ವಿವಾದತ್ಮಕ ಹೇಳಿಕೆಗೆ ಶುಕ್ರವಾರದೊಳಗೆ ಸ್ಪಷ್ಟನೆ ನೀಡುವಂತೆ ಅದರಲ್ಲಿ ಸೂಚಿಸಲಾಗಿದೆ.
ಬಿರ್ಭೂಮ್ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದರು. ಚುನಾವಣಾ ಆಯೋಗ ಪಕ್ಷಪಾತ ಇಲ್ಲದೆ ಕೆಲಸ ಮಾಡುತ್ತದೆ. ಅದರ ಬಗ್ಗೆ ಆಕ್ಷೇಪ ಕೇಳಿಬಂದಾಗ ಸುಮ್ಮನೆ ಇರಲು ಸಾಧ್ಯವಿಲ್ಲ ಎಂದು ಆಂಯೋಗದ ಅಧಿಕಾರಿ ತಿಳಿಸಿದ್ದಾರೆ. ಚುನಾವಣಾ ಆಂಯೋಗ ನೀಡಿದ ನೋಟಿಸನ್ನು ಪಕ್ಷದ ವೆಬ್‍ಸೈಟಲ್ಲಿ ಪ್ರಕಟಿಸಬೇಕಾಗಿದೆ.