ಡಿಆರ್ ಡಿಒ ಗೆ ಮೀಸಲಿಡುವ ಬಜೆಟ್ ನ್ನು ಏರಿಕೆ ಮಾಡಲು ಒತ್ತಾಯ

ರಕ್ಷಣಾ ಸಂಶೋಧನಾ ಸಂಸ್ಥೆ(ಡಿ.ಆರ್.ಡಿ.ಒ), ತನ್ನ ಬಜೆಟ್ ನ್ನು ಹೆಚ್ಚಿಸುವಂತೆ ಒತ್ತಾಯಿಸಿದೆ.
ಡಿಆರ್ ಡಿಒ
ಡಿಆರ್ ಡಿಒ

ನವದೆಹಲಿ: ರಕ್ಷಣಾ ಸಂಶೋಧನಾ ಸಂಸ್ಥೆ(ಡಿ.ಆರ್.ಡಿ.ಒ), ತನ್ನ ಬಜೆಟ್ ನ್ನು ಹೆಚ್ಚಿಸುವಂತೆ ಒತ್ತಾಯಿಸಿದೆ. ಚೀನಾ ತನ್ನ ರಕ್ಷಣಾ ಕ್ಷೇತ್ರದ ಸಂಶೋಧನೆ ಹಾಗೂ ಅಭಿವೃದ್ಧಿಗೆ ಶೇ.20 ರಷ್ಟು ಹಣ ಮೀಸಲಿಡುತ್ತದೆ. ಆದರೆ ಭಾರತದಲ್ಲಿ ಮಾತ್ರ ಶೇ.5 -6 ರಷ್ಟು ಹಣ ಮೀಸಲಿಡಲಾಗುತ್ತಿದೆ ಎಂದು ಹೇಳಿದೆ.

ಇದೇ ವೇಳೆ ಡಿ.ಆರ್.ಡಿ.ಒ ಉದ್ಯೋಗಿಗಳನ್ನು ಹೆಚ್ಚಿಸುವಂತೆಯೂ ಡಿ.ಆರ್.ಡಿ.ಒ ಆಗ್ರಹಿಸಿದೆ. ಸಂಸ್ಥೆಯ ಪ್ರಧಾನ ನಿರ್ದೇಶಕ ಎಸ್ ಕ್ರಿಸ್ಟಫರ್ ಈ ಬಗ್ಗೆ ಮಾತನಾಡಿದ್ದು, ಕೆಲವು ವಿಷಯಗಳು ಸಂಸ್ಥೆಯ ಬೆಳವಣಿಗೆ ಬಗ್ಗೆ ಆತಂಕಕಾರಿಯಾಗಿದೆ. ಡಿ.ಆರ್.ಡಿ.ಒ ಗೆ ನೀಡಲಾಗುತ್ತಿರುವ ಬಜೆಟ್ ನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದಾರೆ. ವೈಜ್ಞಾನಿಕ ಮಾನವಶಕ್ತಿಯನ್ನು ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ಕ್ರಿಸ್ಟಫರ್ ಹೇಳಿದ್ದಾರೆ.

ಶೇ.5 -6 ರಷ್ಟು ಬಜೆಟ್ ನಲ್ಲಿ ರಕ್ಷಣೆಗೆ ಅಗತ್ಯವಿರುವ ಸಂಶೋಧನೆ ಹಾಗೂ ಅಭಿವೃದ್ಧಿ(ಆರ್&ಡಿ) ಗುರಿ ತಲುಪಲು ಸಾಧ್ಯವಿಲ್ಲ. ನೆರೆ ರಾಷ್ಟ್ರ ಚೀನಾ ರಕ್ಷಣಾ ಕ್ಷೇತ್ರದ ಆರ್&ಡಿಗಾಗಿ ಶೇ.20 ರಷ್ಟು ಬಜೆಟ್ ನ್ನು ಮಿಸಲಿಡುತ್ತಿದೆ.  ಡಿ.ಆರ್.ಡಿ.ಒದ ಮಾನವಶಕಿಯೂ ಸಹ 2001 ರಿಂದ ಏರಿಕೆಯಾಗಿಲ್ಲ ಎಂದು ಡಿ.ಆರ್.ಡಿ.ಒ ಪ್ರಧಾನ ನಿರ್ದೇಶಕ ಕ್ರಿಸ್ಟಫರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com