ಮುಸ್ಲಿಂ ಯುವಕನಿಂದ ಹಿಂದೂ ಸ್ನೇಹಿತನ ಅಂತ್ಯ ಸಂಸ್ಕಾರ

ಹಿಂದೂ- ಮುಸ್ಲಿಂ ಬಾಂಧವ್ಯಕ್ಕೆ ಕನ್ನಡಿ ಹಿಡಿಯುವಂತಹ ಘಟನೆಯೊಂದು ಮಧ್ಯಪ್ರದೇಶದ ಬೈತಾಲ್ ಜಿಲ್ಲೆಯಲ್ಲಿ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೂಪಾಲ್:  ಹಿಂದೂ- ಮುಸ್ಲಿಂ ಬಾಂಧವ್ಯಕ್ಕೆ ಕನ್ನಡಿ ಹಿಡಿಯುವಂತಹ ಘಟನೆಯೊಂದು ಮಧ್ಯಪ್ರದೇಶದ ಬೈತಾಲ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹಿಂದೂ ಸ್ನೇಹಿತ ಮೃತಪಟ್ಟಾಗ ಮುಸ್ಲಿಂ ವ್ಯಕ್ತಿಯೊಬ್ಬರು ತಾವೇ ಮುಂದೆ ನಿಂತು ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಆಟೋ ಚಾಲಕ. ಅಬ್ದುಲ್ ರಜಾಕ್. ಆತನಿಗೆ ಸಂತೋಷ್ ಸಿಂಗ್ ಥಾಹಿರ್ ಎಂಬ ಸ್ನೇಹಿತನಿದ್ದ. ಸಂತೋಷ್ ಪತ್ನಿ ಛಾಯಾಬಾಯಿಯೊಂದಿಗೆ ವಾಸವಿದ್ದರು. ಅವರಿಗೆ ಮಕ್ಕಳು, ಸಂಬಂಧಿಕರು ಇರಲಿಲ್ಲ ಎನ್ನಲಾಗಿದೆ. ಹೀಗೆ ಇರುವಾಗ ಸಂತೋಷ್ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆಗ ರಜಾಕ್ ತಾವೇ ಮುಂದೆ ನಿಂತು ಸ್ನೇಹಿತನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ನಾನು ಜಾತಿ, ಧರ್ಮ ನೋಡಿ ಸಂತೋಷ್ ನನ್ನು ಸ್ನೇಹಿತನಾಗಿ ಮಾಡಿಕೊಳ್ಳಲಿಲ್ಲ. ನಮ್ಮ ನಡುವೆ ಆತ್ಮೀಯ ಬಾಂಧವ್ಯ ಇತ್ತು. ಆತ ನಿಧನ ಹೊಂದಿದಾಗ ನಾನೇ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿದೆ ಎಂದು ರಜಾಕ್ ಹೇಳಿದ್ದಾನೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com