
ವಿಜಯಪುರ: ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ವಿಶೇಷ ತಂಡ ನಗರಕ್ಕೆ ಆಗಮಿಸಿ ಹಿಂದು ಸಂಘಟನೆಗಳ ಮೂವರು ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸಿದೆ.
ಸಿಐಡಿ ತಂಡ ಸೋಮವಾರವೇ ನಗರಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಕಲಬುರ್ಗಿ ವಿಜಯಪುರ ಜಿಲ್ಲೆಯವರಾಗಿದ್ದರಿಂದಾಗಿ ತಂಡ ವಿಚಾರಣೆಗೆ ಇಲ್ಲಿಗೆ ಆಗಮಿಸಿದೆ. ಈಗ ಮೂವರು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಸೋಮವಾರ ಐದು ಗಂಟೆ ಕಾಲ ನಿರಂತರವಾಗಿ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆಗೆ ಮನವಿ: ಸಮರ್ಥನೆ
ಧಾರವಾಡ: ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಕುರಿತು ಸೆ. 14ರಂದು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯ ಹಕ್ಕೊತ್ತಾಯಗಳಲ್ಲಿ ಶ್ರೀರಾಮ ಸೇನೆಯನ್ನೊಳಗೊಂಡು ಮತೀಯ ಸಂಘಟನೆಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿರುವುದು ಆ ಸಂಘಟನೆಗಳ ಬಗ್ಗೆ ಹುಟ್ಟಿ ಕೊಂಡಿರುವ ಅನುಮಾನಗಳೇ ಕಾರಣ ಎಂದು `ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ' ಸ್ಪಷ್ಟಪಡಿಸಿದೆ.
ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆ, ವಿಚಾರಣೆ ಮಾಡಿದ ಮಾತ್ರಕ್ಕೆ ಯಾರೂ ಅಪರಾಧಿಗಳಾಗುವುದಿಲ್ಲ. ಆದರೆ, ಮತೀಯ ಸಾಮರಸ್ಯ ಕದಡುವ, ಹಲ್ಲೆ ಮಾಡುವ ಪ್ರಕರಣಗಳಲ್ಲಿ ಇದೇ ಸಂಘಟನೆಯ ಕಾರ್ಯಕರ್ತರ ಪಾತ್ರವಿರುವುದನ್ನು ರಾಜ್ಯ ಹಲವು ಠಾಣೆಗಳಲ್ಲಿ ದೂರು ದಾಖಲಾಗಿವೆ ಎಂದು ಹೇಳಿದೆ.
Advertisement