ಯೂರಿಯಾ ಘಟಕಕ್ಕೆ ಇರಾನ್ ಅನಿಲ

ಪರ್ಷಿಯನ್ ಕೊಲ್ಲಿಯ ಚಾಬಹಾರ್ ಬಂದರಿನಲ್ಲಿ ಭಾರತ ಸ್ಥಾಪಿಸಲು ಉದ್ದೇಶಿಸಿರುವ ಯೂರಿಯಾ ಉತ್ಪಾದನಾ ಘಟಕಕ್ಕೆ ಪ್ರತಿ ಎಂಎಂಬಿಟಿಯು ಅನಿಲವನ್ನು ...
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
 ನವದೆಹಲಿ: ಪರ್ಷಿಯನ್ ಕೊಲ್ಲಿಯ ಚಾಬಹಾರ್ ಬಂದರಿನಲ್ಲಿ ಭಾರತ ಸ್ಥಾಪಿಸಲು ಉದ್ದೇಶಿಸಿರುವ ಯೂರಿಯಾ ಉತ್ಪಾದನಾ ಘಟಕಕ್ಕೆ ಪ್ರತಿ ಎಂಎಂಬಿಟಿಯು ಅನಿಲವನ್ನು 2.95 ಡಾಲರ್‍ಗೆ ನೀಡುವುದಾಗಿ ಇರಾನ್ ಹೇಳಿದೆ ಎಂದು ಕೇಂದ್ರ ಬಂದರು ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದರು. ಇಲ್ಲಿನ ಬಂದರು ನಿರ್ಮಿಸಲು ಭಾರತ ರು. 1 ಲಕ್ಷ ಕೋಟಿ ಹೂಡಿಕೆ ಮಾಡುತ್ತಿದೆ. ಅಣ್ವಸ್ತ್ರ ಅಭಿವೃದ್ಧಿ ಆರೋಪದ ಮೇರೆಗೆ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಇರಾನ್ ಮೇಲೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದ ನಂತರ ಭಾರತ ಇರಾನ್ ಜೊತೆಮಾತುಕತೆಯಲ್ಲಿತೊಡಗಿದೆ. ಆದರೂ ಪ್ರತಿ ಎಂಎಂಬಿಟಿಯು 1.5 ಡಾಲರ್‍ನಂತೆ ನೀಡಬೇಕೆಂದು ಇರಾನ್‍ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಗಡ್ಕರಿ ತಿಳಿಸಿದರು.
ವೋಕ್ಸ್ ವ್ಯಾಗನ್ ಪರಿಣಾಮ ಇಲ್ಲ: ವೋಕ್ಸ್ ವ್ಯಾಗನ್  ಕಂಪನಿಯ ಹೊಗೆ ಹೊರಸೂಸುವುದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಯಾವುದೇ ಆತಂಕ ಅಥವಾ ಸಮಸ್ಯೆಇಲ್ಲಎಂದುಗಡ್ಕರಿಸ್ಪಷ್ಟಪಡಿಸಿದ್ದಾರೆ. ಈಹಗರಣ ಅಮೆರಿಕಕ್ಕೆಸಂಬಂಧಿಸಿದ್ದಾಗಿದ್ದು ಭಾರತಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಆದರೂ ಈ ಬೆಳವಣಿಗೆಗಳ ಕುರಿತು ನಿಕಟ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ವೋಕ್ಸ್  ವ್ಯಾಗನ್ ಡೀಸೆಲ್ ಮಾದರಿಗಳಲ್ಲಿ ಹೊಗೆ ಹೊರಸೂಸುವ ದರ್ಜೆಗೆ ಸಂಬಂಧಿಸಿದಂತೆ ವಂಚನೆಯಾಗಿದೆ ಎಂದು ಮಂಗಳವಾರ ಕಂಪನಿ ಒಪ್ಪಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com