• Tag results for ಇರಾನ್

ಬಾಗ್ದಾದ್‌ನಲ್ಲಿ ಅಮೆರಿಕ ರಾಯಭಾರಿ ಕಚೇರಿ ಬಳಿ ಅಪ್ಪಳಿಸಿದ 3 ರಾಕೆಟ್‌

ಮಧ್ಯ ಬಾಗ್ದಾದ್‌ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್‌ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 21st January 2020

ಮಾತಿನ ಮೇಲೆ ಎಚ್ಚರವಿರಲಿ: ಇರಾನ್ ಪರಮೋಚ್ಚ ನಾಯಕರಿಗೆ ಟ್ರಂಪ್

ಆಡುವ ಮಾತಿನ ಮೇಲೆ ಎಚ್ಚರಿಕೆ ಇರಲಿ ಎಂದು ಇರಾನ್ ಪರಮೋಚ್ಚ ನಾಯಕ ಅಯುತೊಲ್ಲಾ ಅಲಿ ಕಮೇನಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ. 

published on : 18th January 2020

ಯುದ್ಧ ಸಂಘರ್ಷ: ಮೋದಿಯನ್ನು ಭೇಟಿಯಾದ ಇರಾನ್ ವಿದೇಶಾಂಗ ಸಚಿವನಿಗೆ ಪ್ರಧಾನಿ ಕೊಟ್ಟ ಮಾತೇನು?

ಇರಾನ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ, ಭದ್ರತೆ ಮತ್ತು ಸುಸ್ಥಿರತೆ ಕಾಪಾಡುವತ್ತ ಭಾರತ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 15th January 2020

ಟ್ರಂಪ್ ತಣ್ಣಗಾದರೂ ಸುಮ್ಮನಿರದ ಇರಾನ್; ಅಮೆರಿಕ ರಕ್ಷಣಾ ಸಚಿವಾಲಯ ಕಪ್ಪುಪಟ್ಟಿಗೆ ಸೇರಿಸುವ ಕಾನೂನು ಜಾರಿಗೆ ಅಧ್ಯಕ್ಷ ಕರೆ

ಅಮೆರಿಕದ ರಕ್ಷಣಾ ಇಲಾಖೆಯನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿ ಕಪ್ಪುಪಟ್ಟಿಗೆ ಸೇರಿಸುವಂತಾಗುವ ಕಾನೂನು ಜಾರಿಗೆ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಸೋಮವಾರ ಆದೇಶವೊಂದನ್ನು ಹೊರಡಿಸಿದ್ದಾರೆ.

published on : 13th January 2020

ನಿಲ್ಲದ ಸಂಘರ್ಷ: ಇರಾಕ್‌ನಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ರಾಕೆಟ್ ದಾಳಿ, 4 ಸೈನಿಕರಿಗೆ ಗಾಯ

ಇರಾನ್ ಮಹಾ ದಂಡ ನಾಯಕ ಖಾಸೀಂ ಸುಲೈಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಇತ್ತೀಚೆಗೆ ಇರಾಕ್ ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿತ್ತು. ಇದು ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಸೃಷ್ಟಿಸಿತ್ತು.

published on : 12th January 2020

ಇರಾನ್​ ವಾಯುಮಾರ್ಗದಲ್ಲಿ ಸದ್ಯಕ್ಕೆ ಸಂಚಾರ ಬೇಡ; ಇಎಎಸ್​ಎ ಎಚ್ಚರಿಕೆ ಸಂದೇಶ

ಸಂಘರ್ಷ ಪೀಡಿತ ಇರಾನ್ ನಲ್ಲಿ ಸದ್ಯಕ್ಕೆ ವಾಯು ಸಂಚಾರ ಬೇಡ ಎಂದು ಯುರೋಪಿಯನ್​ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.

published on : 12th January 2020

ತಪಿತಸ್ಥರನ್ನು ಶಿಕ್ಷಿಸಿ, ಪರಿಹಾರ ನೀಡಿ ಕ್ಷಮೆ ಕೇಳಿ: ವಿಮಾನ ಹೊಡೆದುರುಳಿಸಿದ ಇರಾನ್ ಗೆ ಉಕ್ರೆನ್ ಒತ್ತಾಯ

ತಮ್ಮ ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು, ಪರಿಹಾರ ನೀಡಿ ಕ್ಷಮೆ ಕೇಳಬೇಕೆಂದು  ಇರಾನ್ ದೇಶವನ್ನು ಉಕ್ರೆನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ ಸ್ಕೈ ಒತ್ತಾಯಿಸಿದ್ದಾರೆ.

published on : 11th January 2020

ಉಕ್ರೇನ್ ವಿಮಾನ ಹೊಡೆದುರುಳಿಸಿದ್ದು ಕ್ಷಮಿಸಲಾಗದ ತಪ್ಪು: ಇರಾನ್ ಅಧ್ಯಕ್ಷ

ತಪ್ಪಾಗಿ ಗ್ರಹಿಸಿ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದು, ಕ್ಷಮಿಸಲಾಗದ ತಪ್ಪಾಗಿದ್ದು, ಪ್ರಮಾದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಹೇಳಿದ್ದಾರೆ. 

published on : 11th January 2020

ಉಕ್ರೇನ್ ವಿಮಾನವನ್ನು ನಾವೇ ಉರುಳಿಸಿದ್ದು, ಆದರೆ ಉದ್ದೇಶಪೂರ್ವಕವಲ್ಲ- ಇರಾನ್ ತಪ್ಪೊಪ್ಪಿಗೆ

ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಉಕ್ರೇನ್ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಇರಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತಪ್ಪು ಗ್ರಹಿಕೆಯಿಂದಾಗಿ ವಿಮಾನ ಹೊಡೆದುರುಳಿಸಲಾಗಿತ್ತು ಎಂದು ಶನಿವಾರ ಹೇಳಿದೆ. 

published on : 11th January 2020

ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗುವುದಿಲ್ಲ: ಅಮೆರಿಕ-ಇರಾನ್ ಬಿಕ್ಕಟ್ಟು ಕುರಿತು ಇಮ್ರಾನ್ ಪ್ರತಿಕ್ರಿಯೆ

ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಯಾರೊಬ್ಬರ ಯುದ್ಧದ ಭಾಗವಾಗದೆ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

published on : 10th January 2020

ಉಕ್ರೇನ್ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ: ಅಮೆರಿಕಾ ಅಧಿಕಾರಿಗಳು 

ಕಳೆದ ಮಂಗಳವಾರ ಉಕ್ರೇನ್ ನ ವಿಮಾನ ಭೀಕರ ಅಪಘಾತಕ್ಕೀಡಾಗಿ ಎಲ್ಲಾ 176 ಪ್ರಯಾಣಿಕರು ಮೃತಪಟ್ಟಿದ್ದು ಇರಾನ್ ನ ಕ್ಷಿಪಣಿ ದಾಳಿಯಿಂದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ. 

published on : 10th January 2020

ಅಮೆರಿಕ-ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ನೌಕಾಪಡೆ

ಅಮೆರಿಕ-ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವಂತೆಯೇ ಇತ್ತ ಇರಾನ್, ಇರಾಕ್ ನಲ್ಲಿರುವ ಭಾರತೀಯರ ರಕ್ಷಣೆಗಾಗಿ ಭಾರತೀಯ ನೌಕಾಪಡೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಸಜ್ಜಾಗಿ ನಿಂತಿದೆ.

published on : 9th January 2020

ಭಾರತೀಯರ ರಕ್ಷಣೆಗೆ ಐಎನ್ಎಸ್ ತ್ರಿಖಂಡ್: ರವೀಶ್ ಕುಮಾರ್

ಇರಾನ್ ನಲ್ಲಿ ಉಂಟಾಗಿರುವ ಪ್ರಕ್ಷಬ್ದ ಪರಿಸ್ಥಿತಿಯ ಹಿನ್ನಲೆಯಲ್ಲಿ ಅಗತ್ಯವೆನಿಸಿದರೆ ಭಾರತೀಯರನ್ನು ಸ್ಥಳಾಂತರಿಸಲು ಐಎನ್ ಎಸ್ ತ್ರಿಖಂಡ್ ಅನ್ನು ಅಲ್ಲಿಗೆ ಕಳುಹಿಸುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

published on : 9th January 2020

ಉಕ್ರೇನ್‌ ವಿಮಾನ ದುರಂತ; ತನಿಖೆಗೆ ಸಹಾಯ ಮಾಡಲು ಐಎಸ್‌ಎಒ ಸಿದ್ಧ

ನಿನ್ನೆ ಅಪಘಾತಕ್ಕೀಡಾದ ಉಕ್ರೇನ್ ಇಂಟರ್‌ ನ್ಯಾಷನಲ್ ಏರ್‌ಲೈನ್ಸ್‌ ಫ್ಲೈಟ್ 752ನ ತನಿಖೆಗೆ ಸಹಾಯ ಮಾಡಲು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

published on : 9th January 2020

ಇರಾನ್-ಅಮೆರಿಕ ಸಂಘರ್ಷ: ಇರಾಕ್ ಮೇಲೆ ಮತ್ತೆ ರಾಕೆಟ್ ದಾಳಿ

ಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ ಮತ್ತೊಂದು ಕ್ಷಿಪಣಿ ದಾಳಿ ವರದಿಯಾಗಿದ್ದು, ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ. 

published on : 9th January 2020
1 2 3 4 5 >