ಇರಾನ್‌ನ 'ಚಬಹಾರ್ ಬಂದರಿ'ನಿಂದ ಹೊರಬರಲು ಭಾರತಕ್ಕೆ ಅಮೆರಿಕದ ಒತ್ತಡ! ಎಷ್ಟು ದೊಡ್ಡ ನಷ್ಟ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶರಣಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದು ಶುದ್ಧ ಕಾಲ್ಪನಿಕ" ಎಂದು ಬಿಜೆಪಿ ಕರೆದಿದ್ದು, ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ.
Iran's Chabahar port
ಚಬಹಾರ್ ಬಂದರು
Updated on

ಇರಾನ್‌ನ ಚಬಹಾರ್ ಬಂದರಿನಿಂದ ಭಾರತ ಹೊರಬರಲು ಅಮೆರಿಕ ಒತ್ತಡ ಹಾಕುತ್ತಿದೆ ಎಂಬ ಮಾತುಗಳು ಕೆಲ ದಿನಗಳಿಂದ ಕೇಳಿಬರುತ್ತಿದೆ. ಇದು ಭಾರತದಲ್ಲಿ ರಾಜಕೀಯ ಕೆಸರೆರಚಟಕ್ಕೆ ಕಾರಣವಾಗಿದೆ.

ಪರ್ಷಿಯನ್ ಕೊಲ್ಲಿ ರಾಷ್ಟ್ರಗಳೊಂದಿಗೆ ವ್ಯಾಪಾರ ಮಾಡುವ ಯಾವುದೇ ದೇಶವು ಶೇ. 25 ರಷ್ಟು ಸುಂಕವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಎಲ್ಲಾ ವ್ಯವಹಾರವನ್ನು ಅಮೆರಿಕದೊಂದಿಗೆ ಮಾಡಬೇಕಾಗುತ್ತದೆ ಎಂದು ಜನವರಿ 12 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಇರಾನ್‌ನ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ದಶಕದಷ್ಟು ಹಳೆಯದಾದ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶರಣಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದು ಶುದ್ಧ ಕಾಲ್ಪನಿಕ" ಎಂದು ಬಿಜೆಪಿ ಕರೆದಿದ್ದು, ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಚಾರದಲ್ಲಿ ಕೇಂದ್ರದ ನಿಲುವನ್ನು ಸ್ಪಷ್ಪಪಡಿಸಿದ್ದಾರೆ. ಅಮೆರಿದ ನಿರ್ಬಂಧ ವಿನಾಯಿತಿಯಡಿ ಏಪ್ರಿಲ್ 26, 2026 ರವರೆಗೆ ಭಾರತ ಚಬಹಾರ್‌ನಲ್ಲಿ ಕಾರ್ಯನಿರ್ವಹಣೆಯನ್ನು ಮುಂದುವರೆಸಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನು ಮತ್ತಷ್ಟು ವಿಸ್ತರಿಸಲು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ MEA ಹೇಳಿದೆ.

ಈ ಮಧ್ಯೆ ಚಬಹಾರ್ ಬಂದರಿನಿಂದ ನಿರ್ಗಮನ ಹಾಗೂ ಬಲೂಚಿಸ್ತಾನದ ಗ್ವಾದರ್ ಬಂದರಿಗೆ ಕಾರ್ಯತಂತ್ರದ ಪ್ರತಿಯಾಗಿ ಚೀನಾ-ಪಾಕಿಸ್ತಾನದ ಕಾರ್ಯತಂತ್ರದ ಲಾಭವನ್ನು ತಗ್ಗಿಸುವ ಯೋಜನೆಯನ್ನು ಮಂಜೂರು ಮಾಡುವ ತರ್ಕವನ್ನು ತಜ್ಞರು ಪ್ರಶ್ನಿಸಿದ್ದಾರೆ. ಭಾರತವು ಚಬಹಾರ್ ತೊರೆಯಲು ಅಮೆರಿಕದ ಒತ್ತಡ ಇದೆ ಎನ್ನಲಾಗುತ್ತಿದೆ. ಇದರಿಂದ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಇರಾನ್‌ನ ಮೇಲೆ US ನಿರ್ಬಂಧಗಳ ಒತ್ತಡವು ತೀವ್ರಗೊಳಿಸಿರುವಾಗ ಭಾರತವು ಚಬಹಾರ್ ಬಂದರು ಯೋಜನೆಯಿಂದ ಹೊರಬರುವಂತೆ ಅಮೆರಿಕ ಒತ್ತಡ ಹೇರುತ್ತಿದೆ ಎಂದು ದಿ ಎಕನಾಮಿಕ್ ಟೈಮ್ಸ್‌ ವರದಿಯೊಂದರಲ್ಲಿ ಹೇಳಲಾಗಿದೆ. ಅಮೆರಿಕ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿಯೇ ಭಾರತದ ಚಬಹಾರ್ ಯೋಜನೆಗೆ ನಿರ್ಬಂಧ ಹಾಕಿದೆ. ಆದರೆ, ಆರು ತಿಂಗಳ ಕಾಲ ನಿರ್ಬಂಧದಿಂದ ವಿನಾಯಿತಿ ನೀಡಿದೆ.

Iran's Chabahar port
Chabahar port: ಇರಾನ್‌ನ ಚಬಹಾರ್ ಬಂದರು 'ನಿರ್ಬಂಧ ವಿನಾಯಿತಿ' ರದ್ದುಗೊಳಿಸಿದ ಅಮೆರಿಕ; ಭಾರತಕ್ಕೆ ಮತ್ತೊಂದು ಹೊಡೆತ!

ವರದಿಯ ಪ್ರಕಾರ, US ನಿರ್ಬಂಧ ಹಾಕುವ ಮುನ್ನವೇ ಭಾರತ ಚಬಹಾರ್ ಬಂದರು ಅಭಿವೃದ್ಧಿಗೆ $ 120 ಮಿಲಿಯನ್ ಅನ್ನು ಇರಾನ್ ಗೆ ವರ್ಗಾಯಿಸಿದೆ ಎನ್ನಲಾಗಿದೆ. ಚಬಹಾರ್ ದಕ್ಷಿಣ ಇರಾನ್ ನ ಬಲೂಚಿಸ್ತಾನದ ಪ್ರಾಂತ್ಯದಲ್ಲಿದ್ದು, ಜಾಗತಿಕ ತೈಲದ ಚೆಕ್ ಪಾಯಿಂಟ್ ಆಗಿದೆ. ರಕ್ಷಣೆ ದೃಷ್ಟಿಯಿಂದ ಭಾರತಕ್ಕೆ ಈ ಬಂದರು ಅತ್ಯಮೂಲ್ಯವಾಗಿದೆ. ಇದು ಪಾಕಿಸ್ತಾನವನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವ ಮೂಲಕ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಕ್ಕೆ ನೇರ ಸಮುದ್ರ ಮಾರ್ಗವನ್ನು ಒದಗಿಸುತ್ತದೆ.

ಇದು ಮುಂಬೈಯನ್ನು ರಷ್ಯಾ ಮತ್ತು ಯುರೋಪ್‌ಗೆ ಇರಾನ್ ಮೂಲಕ ಸಂಪರ್ಕಿಸುತ್ತದೆ. 2003 ರಲ್ಲಿ ಚಬಹಾರ್ ಬಂದರು ನಿರ್ಮಾಣ ಕುರಿತು ಇರಾನ್‌ನೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ ಭಾರತ 2015 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. 2024 ರಲ್ಲಿ, ಭಾರತ ಮತ್ತು ಇರಾನ್ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದವು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com