ಹತ್ಯೆಗೆ ಸಂಚು ರೂಪಿಸಿದರೆ ಇರಾನ್ 'ಈ ಭೂಮಿ ಮೇಲಿಂದ ನಾಶವಾಗುತ್ತದೆ': Donal Trump

ಇರಾನ್ ಮತ್ತು ಅಮೆರಿಕ ಎರಡೂ ದೇಶಗಳ ನಾಯಕರು ಹತ್ಯೆಯಾದರೆ ವ್ಯಾಪಕ ಯುದ್ಧಗಳಿಗೆ ಕಾರಣವಾಗಬಹುದು ಎಂದು ಎರಡೂ ದೇಶಗಳು ಈಗಾಗಲೇ ಪರಸ್ಪರ ಬೆದರಿಕೆ ಹಾಕಿವೆ.
Iran's Ayatollah Ali Khamenei, (Right) and US president Trump
ಇರಾನ್‌ನ ಅಯತೊಲ್ಲಾ ಅಲಿ ಖಮೇನಿ, (ಬಲ) ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್
Updated on

ವಾಷಿಂಗ್ಟನ್: ಇರಾನ್ ಅಮೆರಿಕದ ನಾಯಕನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರೆ, ಇರಾನ್ ನ್ನು ಈ ಭೂಮಿಯಿಂದಲೇ ಅಳಿಸಿಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

ಇರಾನ್ ಮತ್ತು ಅಮೆರಿಕ ಎರಡೂ ದೇಶಗಳ ನಾಯಕರು ಹತ್ಯೆಯಾದರೆ ವ್ಯಾಪಕ ಯುದ್ಧಗಳಿಗೆ ಕಾರಣವಾಗಬಹುದು ಎಂದು ಎರಡೂ ದೇಶಗಳು ಈಗಾಗಲೇ ಪರಸ್ಪರ ಬೆದರಿಕೆ ಹಾಕಿವೆ.

ನನಗೆ ತುಂಬಾ ದೃಢವಾದ ಸೂಚನೆಗಳಿವೆ. ಏನೇ ಅಚಾತುರ್ಯ ಉಂಟಾದರೂ ಅವರನ್ನು ಈ ಭೂಮಿ ಮೇಲೆ ಇಲ್ಲದಂತೆ ಮಾಡಲಾಗುವುದು ಎಂದು ಟ್ರಂಪ್ ನ್ಯೂಸ್ ನೇಷನ್ ಸಂದರ್ಶನದಲ್ಲಿ 79 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರ ಜೀವಕ್ಕೆ ಇರಾನ್‌ನ ಬೆದರಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Iran's Ayatollah Ali Khamenei, (Right) and US president Trump
ಟ್ರಂಪ್ ಹೇಳೋದು ಒಂದು, ಮಾಡೋದು ಇನ್ನೊಂದು; ಆತ ವಂಚಕ, ದ್ರೋಹಿ: ಇರಾನ್ ಪ್ರತಿಭಟನಾಕಾರರ ಆಕ್ರೋಶ!

ಅಯತೊಲ್ಲಾ ಅಲಿ ಖಮೇನಿ ಅವರ ಜೀವಕ್ಕೆ ಇರಾನ್‌ನ ಬೆದರಿಕೆಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಇರಾನಿನ ಜನರಲ್ ಅಬೋಲ್ಫಜಲ್ ಶೇಕಾರ್ಚಿ, ಪರಿಸ್ಥಿತಿ ತಿರುವುಮುರುವಾದರೆ ಇರಾನ್ ಹಿಂದೆ ಸರಿಯುವುದಿಲ್ಲ ಎಂದು ಟ್ರಂಪ್‌ಗೆ ಈಗಾಗಲೇ ತಿಳಿದಿತ್ತು ಎಂದು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.

ನಮ್ಮ ನಾಯಕನ ಕಡೆಗೆ ಆಕ್ರಮಣಕಾರಿ ಕೈ ಚಾಚಿದರೆ, ನಾವು ಆ ಕೈಯನ್ನು ಕತ್ತರಿಸಿ ಮಾತ್ರ ಹಾಕುವುದಿಲ್ಲ ಎಂದು ಟ್ರಂಪ್‌ಗೆ ತಿಳಿದಿದೆ ಎಂದು ಶೇಕಾರ್ಚಿ ಇರಾನ್ ನ ಸರ್ಕಾರಿ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ನಾವು ಅವರ ಜಗತ್ತಿಗೆ ಬೆಂಕಿ ಹಚ್ಚುತ್ತೇವೆ, ಈ ಪ್ರದೇಶದಲ್ಲಿ ಅವರಿಗೆ ಯಾವುದೇ ಸುರಕ್ಷಿತ ತಾಣವನ್ನು ಬಿಡುವುದಿಲ್ಲ ಎಂದು ಪ್ರತಿ ಎಚ್ಚರಿಕೆ ನೀಡಿದ್ದಾರೆ.

Iran's Ayatollah Ali Khamenei, (Right) and US president Trump
ಇರಾನ್ ವಾಯುಪ್ರದೇಶ ಹಠಾತ್ ಸ್ಥಗಿತ: ಭಾರತ-ಅಮೆರಿಕಾ ನಡುವೆ 3 ವಿಮಾನಗಳ ಹಾರಾಟ ರದ್ದು

ವರ್ಷದ ಹಿಂದೆ, ಶ್ವೇತಭವನಕ್ಕೆ ಅಧಿಕಾರಕ್ಕೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ, ಟ್ರಂಪ್ ಇರಾನ್‌ಗೆ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದ್ದರು. 1979 ರ ಇಸ್ಲಾಮಿಕ್ ಕ್ರಾಂತಿಯ ನಂತರದ ಕೆಲವು ದೊಡ್ಡ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ನಡೆದ ಹಿಂಸಾಚಾರದಿಂದ ಇರಾನ್ ಇನ್ನೂ ತತ್ತರಿಸುತ್ತಿದೆ.

ಮಾನವ ಹಕ್ಕುಗಳ ಗುಂಪುಗಳು ಪ್ರತಿಭಟನೆಗಳ ಸಮಯದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ 4,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಸಂವಹನ ನಿರ್ಬಂಧಗಳಿಂದಾಗಿ ಸಾವುಗಳ ಪರಿಶೀಲನೆಗೆ ತೀವ್ರ ಅಡ್ಡಿಯಾಗಿದೆ ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ ಸರ್ಕಾರೇತರ ಸಂಸ್ಥೆ ಹೇಳಿದೆ. ಆದರೆ ಲಭ್ಯವಿರುವ ಮಾಹಿತಿ ಪ್ರಕಾರ ಮೃತ ನಾಗರಿಕರ ಸಂಖ್ಯೆ 20 ಸಾವಿರ ದಾಟಿರಬಹುದು ಎಂದು ಹೇಳಲಾಗುತ್ತಿದೆ.

ಡಿಸೆಂಬರ್‌ನಲ್ಲಿ ಆರ್ಥಿಕ ಸಂಕಷ್ಟಗಳಿಂದ ಪರಿಹಾರಕ್ಕಾಗಿ ಇರಾನಿಯನ್ನರು ಸಾಮೂಹಿಕ ಪ್ರದರ್ಶನಗಳನ್ನು ನಡೆಸಲು ಪ್ರಾರಂಭಿಸಿದರು, ದಶಕಗಳಿಂದ ಪ್ರಜಾಪ್ರಭುತ್ವ ಸುಧಾರಣೆಯನ್ನು ವಿರೋಧಿಸುತ್ತಿರುವ 86 ವರ್ಷದ ಅಯತೊಲ್ಲಾ ನೇತೃತ್ವದಲ್ಲಿ ದೇಶದ ಕರೆನ್ಸಿ ಏರಿಕೆ ಕಂಡುಬಂದಿತ್ತು.

ದೇಶಭ್ರಷ್ಟ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಶಿರಿನ್ ಎಬಾದಿ ಸೇರಿದಂತೆ ಇರಾನ್‌ನ ಜಾಗತಿಕ ವಲಸೆಗಾರರಲ್ಲಿ ಅನೇಕರು ಇರಾನ್ ನಲ್ಲಿ ಅಮೆರಿಕದ ಹಸ್ತಕ್ಷೇಪಕ್ಕೆ ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com