ಮೆಕ್ಕಾ ಕಾಲ್ತುಳಿತ ದುರಂತ (ಸಂಗ್ರಹ ಚಿತ್ರ)
ಮೆಕ್ಕಾ ಕಾಲ್ತುಳಿತ ದುರಂತ (ಸಂಗ್ರಹ ಚಿತ್ರ)

ಹಜ್ ಕಾಲ್ತುಳಿತ ಪ್ರಕರಣ: 18ಕ್ಕೇರಿದ ಮೃತ ಭಾರತೀಯರ ಸಂಖ್ಯೆ

ಹಜ್ ಯಾತ್ರೆಯ ವೇಳೆ ಮೀನಾದಲ್ಲಿ ನಡೆದಕಾಲ್ತುಳಿತಕ್ಕೆ ಬಲಿಯಾದ 717 ಮಂದಿಯ ಪೈಕಿ 18 ಮಂದಿ ಭಾರತೀಯರು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಮಾಹಿತಿ ನೀಡಿದ್ದಾರೆ...

ಮೆಕ್ಕಾ: ಹಜ್ ಯಾತ್ರೆಯ ವೇಳೆ ಮೀನಾದಲ್ಲಿ ನಡೆದಕಾಲ್ತುಳಿತಕ್ಕೆ ಬಲಿಯಾದ 717 ಮಂದಿಯ ಪೈಕಿ 18 ಮಂದಿ ಭಾರತೀಯರು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾನುವಾರ ಮಾಹಿತಿ ನೀಡಿದ್ದಾರೆ.

ಈ ಬಗೆಗಿನ ಸ್ಪಷ್ಟ ಮಾಹಿತಿಯನ್ನು ಸೌದಿ ಅಧಿಕಾರಿಗಳು ಇನ್ನಷ್ಟೇ ಅಧಿಕೃತವಾಗಿ ಘೋಷಿಸಬೇಕಿದೆ ಎಂದೂ ಅವರು ತಿಳಿಸಿದ್ದಾರೆ. ದುರಂತದಲ್ಲಿ 18 ಭಾರತೀಯರು ಮೃತಪಟ್ಟರೆ, 13 ಮಂದಿ  ಗಾಯಗೊಂಡಿದ್ದಾರೆ. ಮೃತರಲ್ಲಿ ಹೆಚ್ಚಿನವರು ಗುಜರಾತ್ (9)ನವರು ಎಂದೂ ಇಲಾಖೆ ತಿಳಿಸಿದೆ. ಜತೆಗೆ, ನಮ್ಮ ರಾಯಭಾರ ಕಚೇರಿ ಅಧಿಕಾರಿ ಗಳು ಮೃತದೇಹಗಳ ಗುರುತು ಪತ್ತೆ ಕಾರ್ಯದಲ್ಲಿ  ತೊಡಗಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ಪಷ್ಟ ಮಾಹಿತಿ ಸಿಗಬಹುದು ಎಂದೂ ಹೇಳಿದೆ.

ಆರೋಪ ಪ್ರತ್ಯಾರೋಪ
ಇನ್ನೊಂದೆಡೆ, ಹಜ್ ದುರಂತಕ್ಕೆ ಸಂಬಂಧಿಸಿಸೌದಿ ಅರೇಬಿಯಾದ ವಿರುದ್ಧ ಆಕ್ರೋಶ ವ್ಯಕ್ತವಾಗತೊಡಗಿದೆ. ನಿರ್ವಹಣೆಯಲ್ಲಾದ ಲೋಪವೇ ಕಾಲ್ತುಳಿತಕ್ಕೆ ಕಾರಣ. ಜತೆಗೆ, ಅಲ್ಲಿದ್ದ  ಅಧಿಕಾರಿಗಳಿಗೆ ಭಾಷಾ ಕೌಶಲವಿರಲಿಲ್ಲ. ವಿದೇಶಿ ಯಾತ್ರಿಕರಲ್ಲಿ ಹೇಗೆ ಮಾತನಾಡಬೇಕು ಎಂಬುದೇಗೊತ್ತಿರಲಿಲ್ಲ. ಸಂಭಾಷಣೆಯ ಕೊರತೆಯೂ ಯಾತ್ರಿಕರನ್ನು ದಾರಿ ತಪ್ಪುವಂತೆ ಮಾಡಿತು ಎಂದು ಹಲವರು ಆರೋಪಿಸಿದ್ದಾರೆ. ಇದೇ ವೇಳೆ, ಸೌದಿ ಅಧಿಕಾರಿಗಳು ಈ ಆರೋಪವನ್ನು ಅಲ್ಲಗಳೆದಿದ್ದು, ಯಾತ್ರಿಕರು ಸೂಚನೆಗಳನ್ನು ಪಾಲಿಸದೇ ತಮ್ಮಿಷ್ಟದಂತೆ ಚಲಿಸಿದ್ದರಿಂದ ಕಾಲ್ತುಳಿತ ಉಂಟಾಯಿತು ಎಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com