ಡಿಜಿಟಲ್ ಇಂಡಿಯಾಗೆ ಸಿಲಿಕಾನ್ ವ್ಯಾಲಿ ಸಿಇಒ ಗಳ ಮೆಚ್ಚುಗೆ: ಭಾರತಕ್ಕೆ ಪೂರಕವಾಗುವ ಯೋಜನೆ ರೂಪಿಸುವ ಭರವಸೆ

ಡಿಜಿಟಲ್ ಇಂಡಿಯಾಗೆ ಪೂರಕವಾಗುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಸಿಇಒ ಗಳು ಭರವಸೆ ನೀಡಿದ್ದಾರೆ.
ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ಮೋದಿ
ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ಮೋದಿ

ಸಿಲಿಕಾನ್ ವ್ಯಾಲಿ: ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿ ಭೇಟಿ ವೇಳೆ ಸಾಫ್ಟ್ ವೇರ್ ಕಂಪನಿಗಳ ಸಿಇಒ ಗಳಿಂದ ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲ ಸಿಕ್ಕಿದ್ದು, ಡಿಜಿಟಲ್ ಇಂಡಿಯಾಗೆ ಪೂರಕವಾಗುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಸಿಇಒ ಗಳು ಭರವಸೆ ನೀಡಿದ್ದಾರೆ.

ಸಿಲಿಕಾನ್ ವ್ಯಾಲಿ ಸಿಇಒ ಗಳೊಂದಿಗೆ ಸಭೆಯಲ್ಲಿ ಪ್ರಧಾನಿ ಮೋದಿ, ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡಿದ್ದಾರೆ. ಇಂಟರ್ ನೆಟ್ ಇಡಿ ವಿಶ್ವವನ್ನೇ ಬದಲಾಯಿಸಿದೆ. ಜಗತ್ತನ್ನು ತಂತ್ರಜ್ಞಾನ ಆವರಿಸಿದ್ದು, ಭಾರತದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರ ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸಲು ಆಡಳಿತದಲ್ಲೂ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡಿದೆ. ತಂತ್ರಜ್ಞಾನ ಅಳವಡಿಕೆಯಿಂದ ಆಡಳಿತದ ಗುಣಮಟ್ಟವೂ ಹೆಚ್ಚಿದ್ದು, ಸಮಸ್ಯೆಗಳನ್ನು ಬಗೆಹರಿಸಲು ನೆರವಾಗಿದೆ ಎಂದಿದ್ದಾರೆ ಮೋದಿ. ತಂತ್ರಜ್ಞಾನದಿಂದ ಮುಖ್ಯ ಕೊಡುಗೆಯಾಗಿರುವ ಸಾಮಾಜಿಕ ಜಾಲತಾಣಗಳು ಸಾಮಾಜಿಕ ಅಡೆತಡೆಗಳನ್ನು ನಿವಾರಿಸುತ್ತಿವೆ. ಟ್ವಿಟರ್ ನಿಂದ ಈಗ ಪ್ರತಿಯೊಬ್ಬರೂ ವರದಿಗಾರರಾಗಿದ್ದಾರೆ. ಫೇಸ್ ಬುಕ್ ನಿಂದಲೇ ಪ್ರತಿಯೊಬ್ಬರ ದಿನ ಪ್ರಾರಂಭವಾಗುತ್ತದೆ. ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಹೊಸ ಪ್ರಪಂಚದ ನೆರೆಹೊರೆಯ ಹೊಸ ಪ್ರದೇಶಗಳಾಗಿವೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಉಚಿತವಾಗಿ ಇಂಟರ್ ನೆಟ್ ವ್ಯವಸ್ಥೆ ನೀಡಲು ಚಿಂತನೆ ನಡೆಸಲಾಗಿದ್ದು, 500 ರೈಲ್ವೆ ಸ್ಟೇಷನ್ ನಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸುವುದಾಗಿ ಮೋದಿ ಹೇಳಿದ್ದರೆ.

ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಗುರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಲಿಕಾನ್ ವ್ಯಾಲಿಯ ಸಿಇಒಗಳು, ಮೋದಿ ಗುರಿ ಬಗ್ಗೆ ಹೆಮ್ಮೆಯಾಗುತ್ತದೆ, ಭಾರತದ ಡಿಜಿಟಲ್ ಇಂಡಿಯಾ ಯೋಜನೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಸಭೆಯಲ್ಲಿ ಮೈಕ್ರೋ ಸಾಫ್ಟ್ ಸಿಇಒ  ಸತ್ಯ ನಾದೆಲ್ಲಾ, ಗೂಗಲ್ ನ ಸಿಇಒ ಸುಂದರ್ ಪಿಚ್ಚೈ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com