ಅಸ್ಸಾಂ: ಕೊಲೋಹಿ ನದಿಯಲ್ಲಿ 200 ಜನರಿದ್ದ ದೋಣಿ ಪಲ್ಟಿ

200 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಯಾಂತ್ರೀಕೃತ ದೋಣಿಯೊಂದು ಅಸ್ಸಾಂನ ಕೊಲೋಹಿ ನದಿಯಲ್ಲಿ ಮುಳುಗಡೆಯಾಗಿದ್ದು 200 ಮಂದಿ ನಾಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ...
ಕೊಲೋಹಿ ನದಿ
ಕೊಲೋಹಿ ನದಿ
ಗುವಾಹಟಿ: 200 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಯಾಂತ್ರೀಕೃತ ದೋಣಿಯೊಂದು ಅಸ್ಸಾಂನ ಕೊಲೋಹಿ ನದಿಯಲ್ಲಿ ಮುಳುಗಡೆಯಾಗಿದ್ದು 200 ಮಂದಿ ನಾಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ.
ಯಾಂತ್ರೀಕೃತ ದೋಣಿಯಲ್ಲಿ ಇಂಜಿನ್ ನಲ್ಲಿ ದೋಷ ಕಂಡುಬಂದಿದ್ದು, ಈ ವೇಳೆ ದೋಣಿ ನಿಯಂತ್ರಣ ತಪ್ಪಿ ಬ್ರಿಡ್ಜ್ ವೊಂದಕ್ಕೆ ದಿಕ್ಕಿ ಹೊಡೆದ ನಂತರ ಹೊಡೆದಿದೆ. ಈ ವೇಳೆ ದೋಣಿಯಲ್ಲಿದ್ದ 200 ಜನರು ದೋಣಿಯ ಕೆಳಗೆ ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿ ವಿನೋದ್ ಹೇಳಿದ್ದಾರೆ.
ದೋಣಿಯು ಚಾಯ್ ಗಾನ್ ನಿಂದ ಚಂಪುಪುರಕ್ಕೆ ಪ್ರಯಾಣಿಸುತ್ತಿತ್ತು. ಸ್ಥಳೀಯರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com