ಸರಣಿ ಸ್ಪೋಟಕ್ಕೆ ಸಂಚು: ಮುಂಬೈ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್

26/11 ಸರಣಿ ಸ್ಪೋಟದಂತೆಯೇ ಮತ್ತೆ ಮುಂಬೈ ಮೇಲೆ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಮುಂಬೈನ ವಿಮಾನ ನಿಲ್ದಾಣದಾದ್ಯಂತ ಮಂಗಳವಾರ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ...
ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ (ಸಂಗ್ರಹ ಚಿತ್ರ)
ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈ (ಸಂಗ್ರಹ ಚಿತ್ರ)

ಮುಂಬೈ: 26/11 ಸರಣಿ ಸ್ಪೋಟದಂತೆಯೇ ಮತ್ತೆ ಮುಂಬೈ ಮೇಲೆ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಮುಂಬೈನ ವಿಮಾನ ನಿಲ್ದಾಣದಾದ್ಯಂತ ಮಂಗಳವಾರ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವಿಶೇಷ್ ಕುಮಾರ್ ಎಂಬ ಹೆಸರಿನ ವ್ಯಕ್ತಿಯೊಬ್ಬ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆಮಾಡಿದ್ದಾನೆ. ಈ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಗುಂಪೊಂದು ಮುಂಬೈ ಮೇಲೆ ದಾಳಿ ಮಾಡುವುದರ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದನ್ನು ತಾನು ಕೇಳಿಸಿಕೊಂಡಿದ್ದು, ಈಗಾಗಲೇ ಶಸ್ತ್ರಾಸ್ತ್ರಗಳನ್ನು ತುಂಬಿಕೊಂಡಿರುವ ಸುಮಾರು 16 ವಾಹನಗಳು ಮುಂಬೈ ನಗರಕ್ಕೆ ಬಂದಿವೆ. ಉಗ್ರರು ಇದೀಗ ಮತ್ತೆ ತಾಜ್ ಹೋಟೆಲ್ ಹಾಗೂ ಮುಂಬೈ ವಿಮಾನ ನಿಲ್ದಾಣಗಳನ್ನು ಗುರಿಯಾಗಿರಿಸಿಕೊಂಡಿದ್ದು, ಸರಣಿ ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆಂಬ ಮಾಹಿತಿಯನ್ನು ವ್ಯಕ್ತಿ ನೀಡಿದ್ದಾನೆಂದು ಹೇಳಲಾಗುತ್ತಿದೆ.

ವ್ಯಕ್ತಿ ನೀಡಿದ ಮಾಹಿತಿ ಅನ್ವಯ ಈಗಾಗಲೇ ಎಚ್ಚರಿಕಾ ಕ್ರಮಗಳನ್ನು ಕೈ ಗೊಂಡಿರುವ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಕರೆ ಮಾಡಿದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಸರಣಿ ಸ್ಪೋಟದ ಕುರಿತಂತೆ ಇದೀಗ ಅನುಮಾನಾಸ್ಪದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಈ ವರೆಗೂ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಕರೆ ಮಾಡಿದ ವ್ಯಕ್ತಿಯ ಕುರಿತಂತೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com