ಭೇಟಿ ಮಾಡಲು ಕೂಗಿ ಚೂರಿ ಇರಿದ ಗೆಳತಿ

ಗೆಳೆಯನನ್ನು ಭೇಟಿ ಮಾಡಲೆಂದು ಕೂಗಿದ ಗೆಳತಿಯೊಬ್ಬಳು ನಂತರ ಆತನಿಗೆ ಚೂರಿ ಇರಿದು ಹತ್ಯೆ ಮಾಡಿರುವ ಘಟನೆಯೊಂದು ಬಾಂದ್ರಾದ ಪ್ರತಿಷ್ಟಿತ ಕಾರ್ಟರ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ...
ಹತ್ಯೆಗೀಡಾದ ಯುವಕ ರಿಜ್ವಾನ್ ಖಾನ್ (ಫೋಟೋ ಕೃಪೆ: ಮಿಡ್ ಡೇ.ಕಾಂ)
ಹತ್ಯೆಗೀಡಾದ ಯುವಕ ರಿಜ್ವಾನ್ ಖಾನ್ (ಫೋಟೋ ಕೃಪೆ: ಮಿಡ್ ಡೇ.ಕಾಂ)

ಮುಂಬೈ: ಗೆಳೆಯನನ್ನು ಭೇಟಿ ಮಾಡಲೆಂದು ಕೂಗಿದ ಗೆಳತಿಯೊಬ್ಬಳು ನಂತರ ಆತನಿಗೆ ಚೂರಿ ಇರಿದು ಹತ್ಯೆ ಮಾಡಿರುವ ಘಟನೆಯೊಂದು ಬಾಂದ್ರಾದ ಪ್ರತಿಷ್ಟಿತ ಕಾರ್ಟರ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ರಿಜ್ವಾನ್ ಖಾನ್ (22) ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಗೆಳೆಯರೊಂದಿಗೆ ಮಸ್ತಿ ಮಾಡಲೆಂದು ದೂರದ ಪ್ರದೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ಈತನ ಗೆಳೆತಿ ಕರೆ ಮಾಡಿ ಭೇಟಿ ಮಾಡಲು ಕೂಗಿದ್ದಾಳೆ. ನಂತರ ಆಕೆಯೇ ಕಾರ್ಟರ್ ರಸ್ತೆ ಬಳಿ ಬರುವಂತೆ ಹೇಳಿದ್ದಾಳೆ. ಗೆಳೆತಿಯ ಕರೆಗೆ ಒಪ್ಪಿದ ಆತ ನಂತರ ತನ್ನ ಗೆಳೆಯರೊಂದಿಗೆ ಸೋಮವಾರ ರಾತ್ರಿ 11ರ ಸುಮಾರಿಗೆ ಗೆಳತಿ ಹೇಳಿದ ಸ್ಥಳಕ್ಕೆ ಹೋಗಿದ್ದಾನೆ. ಈ ಯುವಕನ ಗೆಳೆಯರ ಮುಂದೆಯೇ ಇಬ್ಬರು ಜಗಳಕ್ಕಿಳಿದಿದ್ದಾರೆ. ನಂತರ ಯುವತಿ ಯುವಕನನ್ನು ಆತನ ಗೆಳಯರಿಂದ ಸ್ವಲ್ಪ ದೂರಕ್ಕೆ ಕರೆದೊಯ್ದಿದ್ದಾಳೆ.

ಇಬ್ಬರು ಮಾತನಾಡಿಕೊಳ್ಳುತ್ತಿರುವುದರಿಂದ ಇವರ ಕಡೆ ಗಮನಕೊಡದ ಯುವಕ ಗೆಳೆಯರು ಸುಮ್ಮನಾಗಿದ್ದಾರೆ. ಆದರೆ,  ಸ್ವಲ್ಪ ಸಮಯದ ಬಳಿಕ ಯುವತಿಯೊಂದಿಗೆ ಯುವಕನಿಲ್ಲದ್ದನ್ನು ಕಂಡ ಅತನ ಗೆಳೆಯರು ಗಾಬರಿಯಾಗಿದ್ದಾರೆ. ನಂತರ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಯುವಕ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದೆ.

ಈ ವೇಳೆ ಸ್ಥಳದಲ್ಲಿ ಐವರು ಇತರೆ ಹುಡುಗರ ಗುಂಪು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಗಾಬರಿಯಿಂದ ತಮ್ಮ ಬೈಕ್ ಗಳನ್ನು ಹತ್ತಿ ಹೋಗುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಯುವತಿಯು ಸಹ ಸ್ಥಳದಿಂದ ಪರಾರಿಯಾಗಿದ್ದಾಳೆ. ಅನುಮಾನಗೊಂಡ ಯುವಕನ ಗೆಳೆಯರು ಶಸ್ತ್ರಾಸ್ತ್ರ ಹಿಡಿದು ಹೋಗುತ್ತಿದ್ದ ಯುವಕರ ವಾಹನದ ನಂಬರ್ ದಾಖಲು ಮಾಡಿಕೊಂಡಿದ್ದಾರೆ. ನಂತರ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅತೀವ ರಕ್ತಸ್ರಾವದಿಂದಾಗಿ ಯುವಕ ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

ಹತ್ಯೆಗೀಡಾದ ರಿಜ್ವಾನ್ ಖಾನ್ ನನ್ನ ಗೆಳೆಯ. ಸೋಮವಾರ ರಾತ್ರಿ ನಮ್ಮ ಬಳಿಯೇ ಇದ್ದ. ನಾನು ರಿಜ್ವಾನ್ ಖಾನ್ ಮತ್ತು ಇನ್ನಿತರೆ ಗೆಳೆಯರೆಲ್ಲರೂ ಖಾರ್ ನಲ್ಲಿರುವ ಪಬ್ ನಲ್ಲಿದ್ದೆವು. ಈ ವೇಳೆ ಆತನಿಗೆ ಕರೆ ಮಾಡಿದ ಆತನ ಗೆಳತಿ ಭೇಟಿಯಾಗುವಂತೆ ತಿಳಿಸಿದ್ದಳು. ಹೀಗಾಗಿ ಆತನೊಂದಿಗೆ ನಾವು ಹೋಗಿದ್ದೆವು. ಭೇಟಿ ವೇಳೆ ಇಬ್ಬರು ಜಗಳವಾಡುತ್ತಿದ್ದರು. ಸ್ವಲ್ಪ ಸಮಯದ ಬಳಿಕ ನಮ್ಮಿಂದ ಸ್ವಲ್ಪ ದೂರ ಹೋದರು. ನಂತರ ಗೆಳೆತ ಕಾಣದಿರುವುದನ್ನು ಕಂಡ ನಾವು ಸ್ಥಳಕ್ಕೆ ಹೋದೆವು. ಈ ವೇಳೆ ಆತನಿಗೆ ಚೂರಿ ಇರಿದಿರುವುದು ಕಂಡು ಬಂದಿತು. ಘಟನೆಗೆ ಪ್ರಮುಖ ಕಾರಣ ಆಕೆಯೇ ಎಂದು ಹತ್ಯೆಗೀಡಾದ ರಿಜ್ವಾನ್ ಖಾನ್ ನ ಗೆಳೆಯ ಸೈಫ್ ಮಿರ್ಜಾ ಹೇಳಿದ್ದಾರೆ.

ಯುವಕನ ಗೆಳೆಯರು ನೀಡಿದ ದೂರಿನ ಅನ್ವಯ ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದಲ್ಲಿ ಯುವತಿಯ ಕೈವಾಡ ಪ್ರಮುಖವಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಈಗಾಗಲೇ ಎಲ್ಲರನ್ನೂ ಬಂಧನಕ್ಕೊಳಪಡಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದತ್ತಾತ್ರೇಯ ಬರ್ಗುಡೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com