ದಾದ್ರಿ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಬೇಡಿ: ಮಹೇಶ್ ಶರ್ಮಾ

ದಾದ್ರಿ ಪ್ರಕರಣವೊಂದು ತಪ್ಪು ತಿಳುವಳಿಕೆಯಿಂದಾಗಿದ್ದು ಇದಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ಗುರುವಾರ ಹೇಳಿದ್ದಾರೆ...
ಕೇಂದ್ರ ಸಚಿವ ಮಹೇಶ್ ಶರ್ಮಾ (ಸಂಗ್ರಹ ಚಿತ್ರ)
ಕೇಂದ್ರ ಸಚಿವ ಮಹೇಶ್ ಶರ್ಮಾ (ಸಂಗ್ರಹ ಚಿತ್ರ)
Updated on

ನವದೆಹಲಿ: ದಾದ್ರಿ ಪ್ರಕರಣವೊಂದು ತಪ್ಪು ತಿಳುವಳಿಕೆಯಿಂದಾಗಿದ್ದು ಇದಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಅವರು ಗುರುವಾರ ಹೇಳಿದ್ದಾರೆ.

ದಾದ್ರಿ ಪ್ರಕರಣ ಸಂಬಂಧ ಇಂದು ಪ್ರತಿಕ್ರಿಯೆ ನೀಡಿರುವ ಅವರು, ಗೋಹತ್ಯೆ ಹಾಗೂ ಮಾಂಸ ಸೇವನೆ ಮಾಡಿದ್ದಾರೆಂದು ದಾದ್ರಿಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ನಿಜಕ್ಕೂ ದುರದೃಷ್ಟಕರವಾಗಿದೆ. ವಿರೋಧ ಪಕ್ಷದವರಿಗೆ ಇದೀಗ ಯಾವ ವಿಷಯವೂ ಸಿಕ್ಕಿಲ್ಲ. ಹಾಗಾಗಿ ಅವರಿಗೆ ದಾದ್ರಿ ಪ್ರಕರಣವೊಂದು ಆಹಾರ ಸಿಕ್ಕಂತಾಗಿದೆ. ದಾದ್ರಿ ಪ್ರಕರಣವೊಂದು ತಪ್ಪು ತಿಳುವಳಿಕೆಯಿಂದಾಗಿದ್ದು ಇದಕ್ಕೆ ರಾಜಕೀಯ ಬಣ್ಣ ನೀಡಬೇಡಿ ಎಂದು ಹೇಳಿದ್ದಾರೆ.

ದಾದ್ರಿ ಪ್ರಕರಣವೊಂದು ಅತೀ ಸೂಕ್ಷ್ಮ ಪ್ರಕರಣವಾಗಿದ್ದು, ಈ ಸಂಬಂಧ ವಿರೋಧ ಪಕ್ಷಗಳು ಮಕ್ಕಳ ರೀತಿಯಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಘಟನೆಗೆ ಸ್ಥಳೀಯ ಆಡಳಿತ ಮಂಡಳಿಗಳು ಜವಾಬ್ದಾರಿಯನ್ನು ಹೊರಬೇಕಿದೆ. ಪ್ರಕರಣವನ್ನು ದೊಡ್ಡದು ಮಾಡಬೇಡಿ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ದಾದ್ರಿ ಎಂಬ ಊರಿನಲ್ಲಿ ಹಸುಗಳು ನಾಪತ್ತೆಯಾಗಿದ್ದು, ಈ ಹಸುಗಳನ್ನು ಆ ಊರಿನಲ್ಲಿ ವಾಸವಾಗಿದ್ದ ಮುಸ್ಲಿಂ ಕುಟುಂಬವೊಂದು ಹತ್ಯೆ ಮಾಡಿ ಸೇವನೆ ಮಾಡಿದೆ ಎಂದು ಶಂಕಿಸಿದ ಉತ್ತರ ಪ್ರದೇಶ ದಾದ್ರಿ ಊರಿನಲ್ಲಿದ್ದ ಗುಂಪೊಂದು ಮುಸ್ಲಿಂ ಕುಟುಂಬದ ಮೇಲೆ ದಾಳಿ ಮನೆಯಲ್ಲಿದ್ದ ಮಹಮ್ಮದ್ ಇಕ್ಲಾಕ್ (50) ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿತ್ತು. ಅಲ್ಲದೇ ಮಹಮ್ಮದ್ ಇಕ್ಲಾಕ್ ನ ಮಗನನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಪ್ರಕರಣ ಸಂಬಂಧ ಪೊಲೀಸರು ದಾಳಿ ಮಾಡಿದ 6 ಜನರನ್ನು ಬಂಧನಕ್ಕೊಳಪಡಿಸಿತ್ತು. ಪ್ರಕರಣ ಸಂಬಂಧ ಹಲವು ವಿವಾದಗಳು ಸೃಷ್ಟಿಯಾಗಿದ್ದವಲ್ಲದೇ, ಊರಿನಲ್ಲಿ ಗಲಭೆಯೆದ್ದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com