ಶನಿ ಶಿಂಗ್ಣಾಪುರ ವಿವಾದ: ಮತ್ತೆ ಮಹಿಳೆಯರನ್ನು ತಡೆದ ಸ್ಥಳೀಯರು

ಶನಿಶಿಂಗ್ಣಾಪುರ ವಿವಾದ ಮತ್ತೆ ತಾರಕ್ಕೇರಿದ್ದು, ಬಾಂಬೈ ಹೈ ಕೋರ್ಟ್ ಆದೇಶ ನೀಡಿದ್ದರು ದೇಗುಲ ಪ್ರವೇಶ ಮಾಡಲು ಯತ್ನಿಸಿದ ರಣರಾಗಿಣಿ ಭೂಮಾತ ಬ್ರಿಗೇಡ್ ಕಾರ್ಯಕರ್ತರನ್ನು...
ಶನಿ ಶಿಂಗ್ಣಾಪುರ
ಶನಿ ಶಿಂಗ್ಣಾಪುರ
Updated on

ನವದೆಹಲಿ: ಶನಿಶಿಂಗ್ಣಾಪುರ ವಿವಾದ ಮತ್ತೆ ತಾರಕ್ಕೇರಿದ್ದು, ಬಾಂಬೈ ಹೈ ಕೋರ್ಟ್ ಆದೇಶ ನೀಡಿದ್ದರು ದೇಗುಲ ಪ್ರವೇಶ ಮಾಡಲು ಯತ್ನಿಸಿದ ರಣರಾಗಿಣಿ ಭೂಮಾತ ಬ್ರಿಗೇಡ್ ಕಾರ್ಯಕರ್ತರನ್ನು ಅಲ್ಲಿನ ಪೊಲೀಸರು ಶನಿವಾರ ತಡೆದಿದ್ದಾರೆ.

ನಿನ್ನೆಯಷ್ಟೇ ಬಾಂಬ್ ಹೈ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿತ್ತು. ಸರ್ಕಾರವು ಲಿಂಗ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ. ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು. ಈ ಹಕ್ಕನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿತ್ತು.

ನ್ಯಾಯಾಲಯದ ಆದೇಶದಂತೆ ಇಂದು  ಭೂಮಾತ ಬ್ರಿಗೇಡ್ ಕಾರ್ಯಕರ್ತರು ಇಂದು ದೇಗುಲವನ್ನು ಪ್ರವೇಶಿಸಿಲು ಯತ್ನಿಸಿದ್ದಾರೆ. ಈ ವೇಳೆ ಆ ಊರಿನ ಹೆಣ್ಣು ಮಕ್ಕಳೇ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಸ್ಥಳದಲ್ಲಿ ಕಾರ್ಯಕರ್ತರು ಹಾಗೂ ಸ್ಥಳೀಯರೊಂದಿಗೆ ಮಾತಿಚಕಿ ನಡೆದಿದೆ. ಈ ವೇಳೆ ಮಧ್ಯೆ ಪ್ರವೇಶಿಸಿರುವ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಈ ವೇಳೆ ಕಾರ್ಯಕರ್ತರು ನ್ಯಾಯಾಲಯ ಆದೇಶ ನೀಡಿದ್ದು ದೇಗುಲ ಪ್ರವೇಶಕ್ಕೆ ಬಿಡುವಂತೆ ಆಗ್ರಹಿಸಿದ್ದಾರೆ.

ಇದರಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಪೊಲೀಸರು ಹಾಗೂ ಮಹಿಳೆಯರ ನಡುವೆ ನೂಕುನುಗ್ಗಲು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭೂಮಾತ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿಯವರನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ.

ನ್ಯಾಯಾಲಯದ ಆದೇಶ ನಡುವೆಯೂ ನಮಗೆ ದೇಗುಲ ಪ್ರವೇಶ ಮಾಡಲು ಬಿಡುತ್ತಿಲ್ಲ. ನ್ಯಾಯಾಲಯದ ಆದೇಶವನ್ನು ಕಡೆಗಣಿಸಲಾಗುತ್ತಿದೆ. ನಾವು ಮತ್ತೆ ಮುಂದಿನ ಹೆಜ್ಜೆ ಇಡುವ ಬಗ್ಗೆ ಆಲೋಚಿಸುತ್ತಿಲ್ಲ. ಒಂದು ವೇಳೆ ಅಗತ್ಯಬಿದ್ದರೆ, ಮಹಾರಾಷ್ಟ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ. ಪೊಲೀಸರು ನಮಗೆ ರಕ್ಷಣೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು, ಆದರೆ, ಪೊಲೀಸು ಏನನ್ನೂ ಮಾಡಿಲ್ಲ ಎಂದು ತೃಪ್ತಿ ದೇಸಾಯಿ ಹೇಳಿಕೊಂಡಿದ್ದಾರೆ.

ಮೂಲಗಳ ಪ್ರಕಾರ ವಿವಾದ ಸಂಬಂಧ ದೇಗುಲ ಆಡಳಿತ ಮಂಡಳಿಯ ಅಧಿಕಾರಿಗಳು ಬಾಂಬ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com