ಶೇ.85 ರಷ್ಟು ಎಚ್ಚರಿಕೆ ಸಂದೇಶಕ್ಕೆ ವಿರೋಧ: ಸಿಗರೇಟ್ ಫ್ಯಾಕ್ಟರಿಗಳು ಬಂದ್

ಆರೋಗ್ಯಕ್ಕೆ ಹಾನಿಕರವಾಗಿರುವ ಸಿಗರೇಟ್ ಪ್ಯಾಕ್ ಗಳ ಮೇಲೆ ದೊಡ್ಡ ಗಾತ್ರದ ಚಿತ್ರ ಸಹಿತವಾಗಿ ಎಚ್ಚರಿಕೆ ಪ್ರಕಟಿಸಬೇಕೆಂದು ಸರ್ಕಾರದ ನಿಯಮವನ್ನು ವಿರೋಧಿಸಿರುವ ಟಿಐಐ, ಗಾಢ್ಫ್ರೇ ಫಿಲಿಪ್ಸ್ ಇಂಡಿಯಾ ಸೇರಿದಂತೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಆರೋಗ್ಯಕ್ಕೆ ಹಾನಿಕರವಾಗಿರುವ ಸಿಗರೇಟ್ ಪ್ಯಾಕ್ ಗಳ ಮೇಲೆ ದೊಡ್ಡ ಗಾತ್ರದ ಚಿತ್ರ ಸಹಿತವಾಗಿ ಎಚ್ಚರಿಕೆ ಪ್ರಕಟಿಸಬೇಕೆಂದು ಸರ್ಕಾರದ ನಿಯಮವನ್ನು ವಿರೋಧಿಸಿರುವ ಐಟಿಸಿ, ಗಾಢ್ಫ್ರೇ ಫಿಲಿಪ್ಸ್ ಇಂಡಿಯಾ ಸೇರಿದಂತೆ ಹಲವು ಸಿಗರೇಟ್ ಸಂಸ್ಥೆಗಳು ಗುರುವಾರದಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

ಸಿಗರೇಟ್ ಕಂಪನಿಗಳ ಈ ನಡೆಯಿಂದ ದೇಶದ ತಂಬಾಕು ಉದ್ಯಮದಲ್ಲಿ ದಿನಕ್ಕೆ ರು. 350 ಕೋಟಿ ವಹಿವಾಟು ನಷ್ಟವಾಗಲಿದೆ.

ಈ ಕುರಿತಂತೆ ಮಾತನಾಡಿರುವ (ಟಿಐಐ) ಭಾರತೀಯ ತಂಬಾಕು ಕೇಂದ್ರ ನಿರ್ದೇಶಕ ಸೈಯದ್ ಮಹಮೂದ್ ಅಹ್ಮದ್ ಅವರು, ಸಿಗರೇಟ್ ಪ್ಯಾಕ್ ಗಳ ಮೇಲೆ ದೊಡ್ಡದಾದ ಚಿತ್ರ ಸಹಿತ ಎಚ್ಚರಿಕೆ ಸಂದೇಶವನ್ನು ಮುದ್ರಿಸುವಂತೆ ಸರ್ಕಾರ ಆದೇಶವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೇಳಿ ಮಾರ್ಚ್ 15 ರಂದು ಆರೋಗ್ಯ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದೆವು. ಆದರೆ, ಈ ವರೆಗೂ ಸರ್ಕಾರದ ವತಿಯಿಂದ ಸೂಕ್ತ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

ಗ್ರಾಹಕರಿಗೆ ಎಚ್ಚರಿಕೆ ನೀಡಲು ಪ್ಯಾಕ್ ಗಳ ಮೇಲೆ ಪ್ರಸ್ತುತ ಇರುವ ಶೇ.40ರಷ್ಟು ಸಾಕಿದೆ. ಶೇ.85 ರಷ್ಟು ಪ್ರಮಾಣದ ಚಿತ್ರ ಸಹಿತ ಸಂದೇಶ ಪ್ರಕಟಣೆಯಿಂದ ಅಕ್ರಮ ಸಿಗರೇಟ್ ಮಾರಾಟ ಹೆಚ್ಚಾಗಲಿದೆ. ಇದರಿಂದ ರೈತರು, ಕಾರ್ಮಿಕರು ಮತ್ತು ಮಾರಾಟಗಾರರು ಸೇರಿ 4 ಕೋಟಿಗೂ ಅಧಿಕ ಜನರ ಬದುಕಿನ ಮೇಲೆ ಹೊಡೆತ ಬೀಳಲಿದೆ ಎಂದು ಹೇಳಿದ್ದಾರೆ.
 ವಿಶ್ವ ಆರೋಗ್ಯ ಸಂಸ್ಥೆಯು 2011 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರದಿಯೊಂದನ್ನು ನೀಡಿತ್ತು.

ವರದಿಯಲ್ಲಿ ತಂಬಾಕಿನಿಂದಾಗಿ ಸಾಕಷ್ಟು ಕಾಯಿಲೆಗಳು ಉಂಟಾಗುತ್ತಿದ್ದು, ದೇಶಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ದೇಶದಲ್ಲಿ ಇದರಿಂದಾಗಿ ಉಂಟಾಗುವ ರೋಗದಿಂದ  ರು. 1,04,500 ಕೋಟಿ ಖರ್ಚಾಗುತ್ತಿದೆ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಏ.1 ರಿಂದ ಸಿಗರೇಟ್ ಪ್ಯಾಕ್ ಗಳ ಮೇಲೆ ಶೇ.85 ರಷ್ಟು ಭಾಗವನ್ನು ಉಪಯೋಗಿಸಿಕೊಂಡು ದೊಡ್ಡ ಚಿತ್ರಣದೊಂದಿಗೆ ಎಚ್ಚರಿಕೆಯ ಸಂದೇಶವನ್ನು ಪ್ರಕಟಿಸಲು ಸರ್ಕಾರ ನಿರ್ಧರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com