ಅಂಗವಿಕಲ ಭಿಕ್ಷುಕನ ಕುಟುಂಬವನ್ನು ಒಂದುಗೂಡಿಸಿದ ಲಾಟರಿ ಹಣ

ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಇದ್ದ ವಿಕಲಚೇತನಿಗೆ ಅದೃಷ್ಟದ ಲಕ್ಷ್ಮಿ ಒಲಿದಿದ್ದಾಳೆ. ಈ ಮೂಲಕ ಕುಟುಂಬದವರಿಂದ ದೂರವಿದ್ದ...
ವಿಕಲಚೇತನ ಭಿಕ್ಷುಕ ಪೊನ್ನಯ್ಯ
ವಿಕಲಚೇತನ ಭಿಕ್ಷುಕ ಪೊನ್ನಯ್ಯ
ತಿರುವನಂತಪುರಂ: ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಾ ಇದ್ದ ವಿಕಲಚೇತನಿಗೆ ಅದೃಷ್ಟದ ಲಕ್ಷ್ಮಿ ಒಲಿದಿದ್ದಾಳೆ. ಈ ಮೂಲಕ ಕುಟುಂಬದವರಿಂದ ದೂರವಿದ್ದ ಭಿಕ್ಷುಕ ಮತ್ತೆ ಕುಟುಂಬ ಸೇರಿದ್ದಾನೆ. 
ಆಂಧ್ರಪ್ರದೇಶದ ಪೊನ್ನಯ್ಯ ಎಂಬ ವಿಕಲಚೇತನ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದನು. ಈತನಿಗೆ ರು.65 ಲಕ್ಷ ಲಾಟರಿ ಹೊಡೆದಿದೆ. ಅಕ್ಷಯ ಲಾಟರಿ ಡ್ರಾನಲ್ಲಿ ಪೊನ್ನಯ್ಯ ರು.65 ಲಕ್ಷ ಗೆದ್ದಿದ್ದಾರೆ. 
ಅನಂತಪುರ ಜಿಲ್ಲೆಯ ಕೊರಪ್ಪಡ ಹಳ್ಳಿಯವರಾದ ಪೊನ್ನಯ್ಯ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಅಪಘಾತದಿಂದಾಗಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದರು. ತೀರಾ ಬಡತನ ಕುಟುಂಬದವರಾದ್ದರಿಂದ, ಪತ್ನಿ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗುವನ್ನು ಸಾಕುವುದು ಬಹಳ ಕಷ್ಟಕರವಾಗಿತ್ತು. ಈ ಹಿನ್ನಲೆಯಲ್ಲಿ ಪೊನ್ನಯ್ಯ ಭಿಕ್ಷೆ ಬೇಡಲು ಆರಂಭಿಸಿದರು. ತದ ನಂತರ ಪೊನ್ನಯ್ಯ ತನ್ನ ಅಣ್ಣ ತಮ್ಮಂದಿರಿಂದ ದೂರವಾಗಿದ್ದರು. 
ಭಿಕ್ಷೆ ಬೇಡುತ್ತಿದ್ದಾ ಪೊನ್ನಯ್ಯ 10 ಲಾಟರಿ ಟಿಕೆಟ್ ಗಳನ್ನು ಖರೀದಿಸಿದ್ದರು. ಅದರಲ್ಲಿ AK 651665 ಟಿಕೆಟ್ ನಂಬರ್ ನಿಂದಾಗಿ ಲಾಟರಿ ಗೆದ್ದಿದ್ದಾರೆ. ಈ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿಸಲು ಪೊಲೀಸರ ಸಹಾಯ ಕೇಳಿದ್ದಾನೆ. ಆದರೆ, ಪೊನ್ನಯ್ಯ ಬಳಿ ತನ್ನ ಗುರುತಿನ ಚೀಟಿ ಇಲ್ಲದ ಕಾರಣ ಖಾತೆಯನ್ನು ತೆರೆಯಲು ಯಾವುದೇ ಬ್ಯಾಂಕ್ ಒಪ್ಪಲಿಲ್ಲ. 
ಆಗ ಈ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದ ಪೊಲೀಸರು. ಪೊನ್ನಯ್ಯ ಅವರ ತಂದೆ ತಾಯಿ ಮತ್ತು ಅಣ್ಣ ತಮ್ಮಂದಿರನ್ನು ಹುಡುಕಿ ವಂಶವೃಕ್ಷ ಕೇಳಿ ನಂತರ ಗುರುತಿನ ಚೀಟಿ ಮಾಡಿಸಿದ್ದಾರೆ. ಗುರತಿನ ಚೀಟಿ ಮಾಡಿಸಿದ ನಂತರ ಪೊನ್ನಯ್ಯ ಅವರ ಖಾತೆ ತೆರೆದು ರು.65 ಲಕ್ಷ ಬ್ಯಾಂಕ್ ನಲ್ಲಿ ಜಮೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com