ಭಾರತ-ಪಾಕ್ ನಡುವಿನ ಶಾಂತಿಯುತ ಮಾತುಕತೆಗೆ ಸಹಾಯ ಮಾಡಲು ಸಿದ್ಧ: ಹುರಿಯತ್ ಕಾನ್ಫರೆನ್ಸ್

ಪಾಕಿಸ್ತಾನದೊಂದಿಗಿನ ಸಮಸ್ಯೆಗಳನ್ನು ಶಾಂತಿಯುತ ರೀತಿಯಲ್ಲಿ ಬಗೆಹರಿಸಿಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ಬೆನ್ನಲ್ಲೇ ಹುರಿಯತ್ ಕಾನ್ಫರೆನ್ಸ್ ಭಾರತಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದೆ.
ಹುರಿಯತ್ ಕಾನ್ಫರೆನ್ಸ್ ನ ಮಿರ್ವಾಜ್ ಉಮರ್ ಫಾರೂಕ್
ಹುರಿಯತ್ ಕಾನ್ಫರೆನ್ಸ್ ನ ಮಿರ್ವಾಜ್ ಉಮರ್ ಫಾರೂಕ್

ಶ್ರೀನಗರ: ಪಾಕಿಸ್ತಾನದೊಂದಿಗಿನ ಸಮಸ್ಯೆಗಳನ್ನು ಶಾಂತಿಯುತ ರೀತಿಯಲ್ಲಿ ಬಗೆಹರಿಸಿಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ಬೆನ್ನಲ್ಲೇ ಹುರಿಯತ್ ಕಾನ್ಫರೆನ್ಸ್ ಪಾಕ್- ಭಾರತದ ನಡುವೆ ಶಾಂತಿ ನೆಲೆಸುವಂತೆ ಮಾಡಲು ಅಗತ್ಯ ನೆರವು ನೀಡುವುದಾಗಿ ತಿಳಿಸಿದೆ.
ಕಾಶ್ಮೀರ ವಿವಾದವೂ ಸೇರಿದಂತೆ ಪಾಕಿಸ್ತಾನದೊಂದಿಗಿನ ಸಮಸ್ಯೆಗಳನ್ನು ಶಾಂತಿಯುತ ರೀತಿಯಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಭಾರತ ಸರ್ಕಾರಕ್ಕೆ ಸಹಾಯ ಮಾಡಲಿದೆ ಎಂದು ಹುರಿಯತ್ ಅಧ್ಯಕ್ಷ ಮಿರ್ವಾಜ್ ಉಮರ್ ಫಾರೂಕ್ ಹೇಳಿದ್ದಾರೆ.
ಭಾರತ- ಪಾಕಿಸ್ತಾನದಲ್ಲಿ ಶಾಂತಿ ನೆಲೆಸಬೇಕೆಂದರೆ ಕಾಶ್ಮೀರ ಸಮಸ್ಯೆ ಅಗತ್ಯವಾಗಿ ಬಗೆಹರಿಯಬೇಕು, ಮಾತುಕತೆ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಚ್ಛಿಸುತ್ತಿದ್ದರೆ, ಅವರು ಹೇಳಿದಂತೆಯೇ ನಡೆಯಬೇಕಾಗುತ್ತದೆ ಎಂದು ಫಾರೂಕ್ ಅಭಿಪ್ರಾಯಪಟ್ಟಿದ್ದಾರೆ. ಮಾತುಕತೆ ಮೂಲಕ ಪಾಕಿಸ್ತಾನದೊಂದಿಗಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದನ್ನು ಹುರಿಯತ್ ಕಾನ್ಫರೆನ್ಸ್ ಹಿಂದಿನಿಂದಲೂ ಬೆಂಬಲಿಸುತ್ತಿದೆ. ಆದರೆ ಕಾಶ್ಮೀರ ವಿವಾದ ಬಗೆಹರಿಸುವ ವಿಷಯದಲ್ಲಿ ದೆಹಲಿ ಯಾವಾಗಲೂ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಮಿರ್ವಾಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com