ದಾರುಲ್ ಉಲೂಂ ಉಗ್ರರ ವಿರುದ್ಧ ಫತ್ವಾ ಹೊರಡಿಸಬೇಕಿತ್ತು: ಸಾಧ್ವಿ ನಿರಂಜನ್ ಜ್ಯೋತಿ
ಜೈಪುರ: 'ಭಾರತ್ ಮಾತಾ ಕಿ ಜೈ' ವಿರುದ್ಧ ಫತ್ವಾ ಹೊರಡಿಸಿರುವ ದಾರೂಲ್ ಉಲೂಂ ಇದರ ಬದಲು ಉಗ್ರ ವಿರುದ್ಧ ಫತ್ವಾ ಹೊರಡಿಸಬೇಕಿತ್ತು ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಜೈಪುರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ದಿಯೋಬಂದ್ ನ ಮುಸ್ಲಿಂ ಧಾರ್ಮಿಕ ನಾಯಕರು ಮುಸ್ಲಿಮರು ಭಾರತ್ ಮಾತಾ ಕಿ ಜೈ ಎಂದು ಕೂಗಬಾರದು ಎಂದು ಫತ್ವಾ ಹೊರಡಿಸಿದ್ದಾರೆ. ಆದರೆ, ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿರುವ ಉಗ್ರರ ವಿರುದ್ಧ ಫತ್ವಾ ಹೊರಡಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಜೆಎನ್ ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಯಿತು. ದುರಾದೃಷ್ಟಕರ ಸಂಗತಿ ಎಂದರೆ ಸ್ವಾತಂತ್ರ್ಯ ಬಂದ ನಂತರ ಹಲವು ವರ್ಷಗಳಿಂದ ದೇಶವನ್ನು ಆಳಿದ ಪಕ್ಷವೇ ಅವರ ಹಿಂದೆ ನಿಂತು ಅವರ ಚಟುವಟಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿತು ಎಂದು ಹೇಳಿದ್ದಾರೆ.
ಇದೇ ವೇಳೆ ಹೆಚ್ಚುತ್ತಿರುವ ಜನಸಂಖ್ಯೆ ಕುರಿತಂತೆ ಮಾತನಾಡಿರುವ ಅವರು, ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರ ತಾನು ನೀಡಿರುವ ಸೌಲಭ್ಯವನ್ನು ಹಿಂಪಡೆಯಬೇಕು ಎಂದಿದ್ದಾರೆ.
ಇದೇ ವೇಳೆ ರಾಕೇಶ್ ಸಿನ್ಹಾ ಮಾತನಾಡಿ, ಹಿಂದೂ ಸಮುದಾಯಗಳ ಪ್ರಾಮುಖ್ಯತೆ ಬಗ್ಗೆ ಪ್ರಸ್ತಾಪಿಸಿದರು. ಸಮುದಾಯದಲ್ಲಿರುವ ಜನರು ದೇಶದ ಸಂಸ್ಕೃತಿಯನ್ನು ಸಮತೋಲನದಲ್ಲಿಟ್ಟುಕೊಳ್ಳುವಂತೆ ಮಾಡಬೇಕು. ವಿಶ್ವದಲ್ಲಿರುವ ಸಾಕಷ್ಟು ದೇಶಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ಸಾಂಸ್ಕೃತಿಕ ಅಸಮತೋಲನ್ನು ಎದುರಿಸುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ