ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿದ್ದೇಕೆ?: ಒಮರ್ ಅಬ್ದುಲ್ಲಾ ಪ್ರಶ್ನೆ

ಜಮ್ಮು-ಕಾಶ್ಮೀರದಲ್ಲಿ ನಡೆದ ಪ್ರಮಾಣ ವಚರ ಸ್ವೀಕಾರ ಸಮಾರಂಭದಲ್ಲಿ ಟಿವಿ ಮಾಧ್ಯಮಗಳನ್ನು ಹೊರಗಿಟ್ಟಿದ್ದೇಕೆ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್...
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ನಡೆದ ಪ್ರಮಾಣ ವಚರ ಸ್ವೀಕಾರ ಸಮಾರಂಭದಲ್ಲಿ ಟಿವಿ ಮಾಧ್ಯಮಗಳನ್ನು ಹೊರಗಿಟ್ಟಿದ್ದೇಕೆ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸೋಮವಾರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮೆಹಬೂಬಾ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾಗ ಸಮಾರಂಭಕ್ಕೆ ಕೇವಲ ಡಿಡಿ ಹಾಗೂ ಎಎನ್ ಐ ಸುದ್ದಿ ವಾಹಿನಿಗಳ ಒಬಿ ವ್ಯಾನ್ ಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಇನ್ನಿತರೆ ಮಾಧ್ಯಮಗಳನ್ನು ಹೊರಗಿಡಲಾಯಿತು. ಯಾವ ಕಾರಣಕ್ಕಾಗಿ ಮಾಧ್ಯಮಗಳನ್ನು ಹೊರಗಿಡಲಾಯಿತು.

ಈ ಹಿಂದೆ ರಾಜ್ಯದಲ್ಲಿ ಈ ರೀತಿಯಾಗಿ ಎಂದಿಗೂ ಆಗಿಲ್ಲ. ಮುಖ್ಯವಾಗಿ 2009-2015ರ ಅವಧಿಯಲ್ಲಿ ಆಗಿರಲಿಲ್ಲ. ಬಿಜೆಪಿಡಿಪಿ ಮಾಧ್ಯಮಗಳ ವ್ಯವಸ್ಥಾಪಕರೇಕೆ ಈ ರೀತಿ ಮಾಡಿದರು ಎಂದು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com