
ಚಿತ್ತೋರಗಢ್: ಮೇಲ್ಜಾತಿ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಅಪ್ರಾಪ್ತ ಬಾಲಕರನ್ನು ರಸ್ತೆ ಮಧ್ಯದಲ್ಲೇ ಅಮಾನವೀಯವಾಗಿ ಥಳಿಸಿರುವ ಘಟನೆ ಚಿತ್ತೋರಗಢ್ ನ ಬಸ್ಸಿ ತೆಹ್ಸೀಲ್ ನಲ್ಲಿ ಮಂಗಳವಾರ ನಡೆದಿದೆ.
ಬೈಕ್ ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಬಾಲಕರ ಮೇಲೆ ಮುಗಿ ಬಿದ್ದಿದ್ದ ಅಲ್ಲಿನ ಸ್ಥಳೀಯರು, ಬಾಲಕರನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ. ಆಕ್ರೋಶಿತ ಜನರ ಥಳಿತದಿಂದ ನೋವಿನಿಂದ ಚೀರುತ್ತಿದ್ದ ಬಾಲಕರು ಸಹಾಯಕ್ಕಾಗಿ ಮೊರೆ ಇಟ್ಟರಾದರೂ ಯಾರೊಬ್ಬರು ಅವರನ್ನು ಬಿಡಿಸುವ ಪ್ರಯತ್ನವನ್ನು ಮಾಡಿಲ್ಲ.
ಅಲ್ಲದೆ, ಘಟನೆ ಸಂಬಂಧ ಥಳಿಕ್ಕೊಳಗಾದ ಬಾಲಕರ ವಿರುದ್ಧವೇ ಸ್ಥಳೀಯರು ಪೊಲೀಸರ ಬಳಿ ಪ್ರಕರಣವನ್ನು ದಾಖಲಿಸಿದ್ದಾರೆ. ಸಾಮಾಜಿಕ ತಾಲತಾಣಗಳಲ್ಲಿ ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಎಸ್'ಸಿ/ಎಸ್'ಟಿ ಕಾಯ್ದೆ ಅಡಿಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
Three #dalit boys aged 11-15 were stripped n thrashed by upper caste in Bassi tehsil in #Chittorgarh on Saturday. pic.twitter.com/TDZGQkjSkT
— Shoeb Khan (@ShoebKhanTOI) April 4, 2016
Advertisement