

ಚೆನ್ನೈ: ಮದ್ರಾಸ್ ಪರಮಾಣು ವಿದ್ಯುತ್ ಯೋಜನೆ (ಈಗ ಮದ್ರಾಸ್ ಅಟೋಮಿಕ್ ಪವರ್ ಸ್ಟೇಷನ್)ಯ ಮೊದಲ ನಿರ್ದೇಶಕ ಮೈನೆನಿ ಹರಿ ಪ್ರಸಾದ್ ರಾವ್(88) ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಜ್ನಾನ ಹಾಗೂ ತಂತ್ರಜ್ನಾನಕ್ಕೆ ಮೈನೆನಿ ಹರಿ ಪ್ರಸಾದ್ ಅವರ ಸಾಧನೆಯನ್ನು ಗುರುತಿಸಿ 1984ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಇಹಲೋಕ ತ್ಯಜಿಸಿರುವ ಹರಿ ಪ್ರಸಾದ್ ರಾವ್ ಅವರಿಗೆ ನಾಲ್ವರು ಮಕ್ಕಳಿದ್ದಾರೆ.
ಹರಿ ಪ್ರಸಾದ್ ರಾವ್ ಅಣುಶಕ್ತಿ ಇಲಾಖೆಯಲ್ಲಿ ಮೂರು ದಶಕಗಳು ಸೇವೆ ಸಲ್ಲಿಸಿದ್ದರು ನಂತರ ಅಣು ಶಕ್ತಿ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಮೂರು ವರ್ಷ ಸೇವೆ ಸಲ್ಲಿಸಿದ್ದರು.