ಐಪಿಎಲ್ ಗಿಂತ ಜನರ ಯೋಗಕ್ಷೇಮ ಮುಖ್ಯ: ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

ಐಪಿಎಲ್ ಪಂದ್ಯಕ್ಕಾಗಿ ನೀರು ಪೋಲು ಮಾಡುವುದಕ್ಕೆ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಕ್ರಿಕೆಟ್ ಮಂಡಳಿಗೆ ಮುಂಬೈ ಹೈಕೋರ್ಟ್ ಛೀಮಾರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಐಪಿಎಲ್ ಪಂದ್ಯಕ್ಕಾಗಿ ನೀರು ಪೋಲು ಮಾಡುವುದಕ್ಕೆ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಕ್ರಿಕೆಟ್ ಮಂಡಳಿಗೆ ಮುಂಬೈ ಹೈಕೋರ್ಟ್ ಛೀಮಾರಿ ಹಾಕಿದೆ. ಕ್ರಿಕೆಟ್ ಪಂದ್ಯಕ್ಕಿಂತ ಜನರ ಕ್ಷೇಮ ಮುಖ್ಯ ಎಂದು ನ್ಯಾಯಾಲಯ ಹೇಳಿದೆ.

ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ಐಪಿಎಲ್ ಟೂರ್ನಮೆಂಟ್ ಸಮಯದಲ್ಲಿ ಕ್ರಿಕೆಟ್ ಮೈದಾನದ ನಿರ್ವಹಣೆಗೆ ಬಳಸುವ ನೀರಿಗೆ ಪ್ರತಿ ಲೀಟರ್ ಗೆ ಒಂದು ಸಾವಿರ ರೂಪಾಯಿ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ಹೊರಡಿಸಬೇಕೆಂದು ಮಾಜಿ ಪತ್ರಕರ್ತ ಕೇತನ್ ತಿರೋಡ್ಕರ್ ಹೇಳಿದ್ದಾರೆ.

ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮಹಾರಾಷ್ಟ್ರದ ಬರಗಾಲಪೀಡಿತ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಐಪಿಎಲ್ ಸಂಘಟಕಾರರಿಂದ ಹೆಚ್ಚುವರಿ ದರ ವಿಧಿಸಬೇಕು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ವರ್ಷ ಬರಗಾಲವಿರುವುದರಿಂದ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ವರ್ಗಾಯಿಸುವುದನ್ನು ಈ ಹಿಂದೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಳ್ಳಿ ಹಾಕಿದ್ದರು. ಪಂದ್ಯವನ್ನಾಡುವ ಕ್ರೀಡಾಂಗಣದ ತಯಾರಿಗೆ ಭಾರೀ ಪ್ರಮಾಣದಲ್ಲಿ ನೀರು ಬೇಕಾಗಿರುವುದರಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸದಂತೆ ಸಮಾಜದ ಕೆಲವು ವರ್ಗಗಳಿಂದ ಒತ್ತಾಯ ಕೇಳಿಬಂದಿತ್ತು.
 
ಕ್ರಿಕೆಟ್ ಮೈದಾನದ ಪಿಚ್ ಕಾಪಾಡಲು ಪ್ರತಿದಿನ ಸುಮಾರು 60 ಸಾವಿರ ಲೀಟರ್ ನೀರು ಬೇಕಾಗುವುದರಿಂದ ನೀರು ಬಳಸಿದ್ದಕ್ಕೆ ತೆರಿಗೆ ವಿಧಿಸುವಂತೆ ಐಪಿಎಲ್ ಅಧ್ಯಕ್ಷರಿಗೆ ಸೂಚಿಸುವಂತೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಮುಂಬೈ ಬಿಜೆಪಿ ಕಾರ್ಯದರ್ಶಿ ವಿವೇಕಾನಂದ ಗುಪ್ತ ಸಹ ಮಹಾರಾಷ್ಟ್ರದಿಂದ ಐಪಿಎಲ್ ಪಂದ್ಯವನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

ಐಪಿಎಲ್ ಪಂದ್ಯ ಇದೇ 9ರಂದು ಮುಂಬೈಯಲ್ಲಿ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com