ಅಸ್ಸಾಂನಲ್ಲಿ ಸರ್ವಾಧಿಕಾರ ತರಲು ಬಯಸುತ್ತಿದೆ ಬಿಜೆಪಿ: ಸೋನಿಯಾ ಗಾಂಧಿ

ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ ಅಸ್ಸಾಂನಲ್ಲಿ ಸರ್ವಾಧಿಕಾರ ತರಲು ಬಯಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಗುರುವಾರ ಆರೋಪಿಸಿದ್ದಾರೆ...
ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬರ್ಪೇಟದಲ್ಲಿ ಆಯೋಜಿಸಲಾಗಿರುವ  ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿರುವ ಸೋನಿಯಾ ಗಾಂಧಿ
ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬರ್ಪೇಟದಲ್ಲಿ ಆಯೋಜಿಸಲಾಗಿರುವ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿರುವ ಸೋನಿಯಾ ಗಾಂಧಿ

ಬರ್ಪೇಟ: ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರ ಅಸ್ಸಾಂನಲ್ಲಿ ಸರ್ವಾಧಿಕಾರ ತರಲು ಬಯಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಗುರುವಾರ ಆರೋಪಿಸಿದ್ದಾರೆ.

ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬರ್ಪೇಟ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಅಸ್ಸಾಂ ಜನತೆಯ ಎದುರಿಸುತ್ತಿರುವ ದುರಾವಸ್ಥೆಯನ್ನು ಸರಿಪಡಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ಇದೀಗ ಅಸ್ಸಾಂನಲ್ಲಿ ಸರ್ವಾಧಿಕಾರ ರೂಪಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಮೋದಿ ಹಾಗೂ ಅವರ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಅನೇಕ ಭರವಸೆಗಳನ್ನು ನೀಡುತ್ತಾರೆ. ಅವರ 2 ವರ್ಷದ ಸಾಧನೆಗಳನ್ನು ಹೈಲೈಟ್ ಮಾಡುತ್ತಾರೆ, ಆದರೆ ಜನರ ದುರಾವಸ್ಥೆಯನ್ನು ಸರಿಪಡಿಸುವಲ್ಲಿ ಮಾತ್ರ ವಿಫಲರಾಗಿದ್ದಾರೆ.

ಎಲ್ಲಾ ಸಮುದಾಯದ ಜನರನ್ನು ತಾರತಮ್ಯವಿಲ್ಲದೆ ನೋಡುತ್ತಿರುವ ಒಂದೇ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ. ಮೋದಿಯವರು ವಿದೇಶಕ್ಕೆ ಭೇಟಿ ನೀಡಿದಾಕ ಅಭಿವೃದ್ಧಿ ಹಾಗೂ ಶಾಂತಿ ಬಗ್ಗೆ ಮಾತನಾಡುತ್ತಾರೆ. ಆದರೆ, ತಾಯಿನಾಡಿನಲ್ಲಿ ಅವರ ಸಹೋದ್ಯೋಗಿಗಳು ದ್ವೇಷದ ಹೇಳಿಕೆಗನ್ನು ನೀಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ದೊಡ್ಡ ಉದ್ಯಮಗಳ ಪರವಾಗಿ ನಿಂತಿರುವ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಮೋದಿ ಸರ್ಕಾರ ಸಣ್ಣ ಉದ್ಯಮಿಗಳಿಗೆ ಏನು ಮಾಡಿದೆ? ಸಣ್ಣ ಉದ್ಯಮಿಗಳಿಗೆ ಸಹಕಾರ ನೀಡುವ ಬದಲು ಅವರ ಮೇಲೆ ತೆರಿಗೆ ಹೇರುವ ಮೂಲಕ ಮತ್ತಷ್ಟು ಸಂಕಷ್ಟವನ್ನು ನೀಡಿದೆ ಎಂದು ಹೇಳಿದ್ದಾರೆ. \

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com