ಮುಂಬಯಿ: ಹಲವು ದಿನಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ಶನಿ ಸಿಂಗಣಾಪುರ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಲು ದೇವಾಲಯದ ಟ್ರಸ್ಟ್ ಮುಂದಾಗಿದೆ.
ಮಹಿಳೆಯರಿಗೆ ದೇವಾಲಯ ಪ್ರವೇಶ ಸಂಬಂಧ ಸಭೆ ನಡೆಸಿದ ಟ್ರಸ್ಟಿಗಳು ಇಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.ಸುಮಾರು 400 ವರ್ಷಗಳಿಂದ ದೇವಾಲಯದ ಗರ್ಭಗುಡಿಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇನ್ನು ಮೂಲಗಳ ಪ್ರಕಾರ ಕೇವಲ ಇವತ್ತು ಮಾತ್ರ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ.
ಇನ್ನು ದೇವಾಲಯ ಆಡಳಿತ ಮಂಡಳಿಯ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತೆ ತಪ್ತಿ ದೇಸಾಯಿ ಮಹಿಳೆಯರಿಗೆ ದಕ್ಕಿದ ಅತಿ ದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ, ಕೋರ್ಟ್ ಹಾಗೂ ದೇವಾಲಯ ಟ್ರಸ್ಟ್ ಗೆ ಧನ್ಯವಾದ ಹೇಳಿರುವ ತೃಪ್ತಿ ದೇಸಾಯಿ, ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು, ಎಲ್ಲೂ ಮಹಿಳೆಯರ ಹಕ್ಕಿ ಕಸಿದು ಕೊಳ್ಳಲು ಯತ್ನಿಸಬಾರದು ಎಂದು ಹೇಳಿದ್ದಾರೆ.
ಇನ್ನು ಇಂದು ಕೆಲ ಪುರುಷ ಭಕ್ತಾದಿಗಳು ದೇವಾಲಯದ ಗರ್ಭಗುಡಿ ಪ್ರವೇಶಿಸಿ ಮೂಲ ಶನಿ ದೇವರ ವಿಗ್ರಹಕ್ಕೆ ಅಭಿಷೇಕ ಪೂಜೆ ಸಲ್ಲಿಸಿದ್ದಾರೆ.
Advertisement