ಛತ್ತೀಸ್ ಗಡದಲ್ಲಿ 122 ನಕ್ಸಲರ ಶರಣಾಗತಿ

ಪ್ರಮುಖ ಬೆಳವಣಿಗೆಯೊಂದರಲ್ಲಿ ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ 122 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ..
ನಕ್ಸಲರ ಶರಣಾಗತಿ (ಸಂಗ್ರಹ ಚಿತ್ರ)
ನಕ್ಸಲರ ಶರಣಾಗತಿ (ಸಂಗ್ರಹ ಚಿತ್ರ)

ಸುಕ್ಮಾ: ಪ್ರಮುಖ ಬೆಳವಣಿಗೆಯೊಂದರಲ್ಲಿ ನಕ್ಸಲ್ ಪೀಡಿತ ಛತ್ತೀಸ್ ಗಢದಲ್ಲಿ 122 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಬಸ್ತಾರ್ ನಲ್ಲಿ ಶನಿವಾರ 122 ಮಂದಿ ನಕ್ಸಲರು ಶರಣಾಗಿದ್ದು, ಶರಣಾದ ನಕ್ಸಲರ ಪೈಕಿ 11 ಮಂದಿ ಮಹಿಳೆಯರೂ ಕೂಡ ಇದ್ದಾರೆ ಎಂದು  ತಿಳಿದುಬಂದಿದೆ. ಸದಾ ನಕ್ಸಲ್ ವಿರೋಧಿ ಕಾರ್ಯಾಚರಣೆಯಿಂದ ಸುದ್ದಿಯಲ್ಲಿರುವ ಬಸ್ತಾರ್ ನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ನಕ್ಸಲರು ಬಸ್ತಾರ್ ಐಜಿಪಿ ಎಸ್  ಆರ್ ಪಿ ಕಲ್ಲುರಿ ಮತ್ತು ಸುಕ್ಮಾ ಜಿಲ್ಲಾಧಿಕಾರಿ ನೀರಜ್ ಬನ್ಸೋದ್ ಮತ್ತು ಸುಕ್ಮಾ ಎಸ್ ಪಿ ಡಿ.ಶ್ರವಣ್ ಅವರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರವಲಷ್ಟೇ ಇದೇ ಬಸ್ತಾರ್ ನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದ ಮೂವರು ನಕ್ಸಲರು ಹತರಾಗಿದ್ದರು. ಘಟನೆ ನಡೆದು ಒಂದು  ವಾರದ ಆವಧಿಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com