ಕೊಲ್ಲಂ: ಭಾನುವಾರ ಮುಂಜಾನೆ ಇಲ್ಲಿನ ಪರವೂರ್ ಪುಟ್ಟಿಂಗಲ್ ದೇವಾಲಯದಲ್ಲಿ ಸಂಭವಿಸಿದ ಅತೀ ದೊಡ್ಡ ಪಟಾಕಿ ದುರಂತವಾಗಿದೆ. ಈ ಹಿಂದೆ 1952ರಲ್ಲಿ ಶಬರಿಮಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 68 ಮಂದಿ ಸಾವಿಗೀಡಾಗಿದ್ದರು.
ಕೇರಳದಲ್ಲಿ ಸಂಭವಿಸಿದ ಪಟಾಕಿ ದುರಂತಗಳು
1952 ಜನವರಿ : ಶಬರಿಮಲೆಯಲ್ಲಿ ಜನವರಿ 14 ರಂದು ಮುಂಜಾನೆ ಸಂಭವಿಸಿದ ಪಟಾಕಿ ದುರಂತದಲ್ಲಿ 68 ಮಂದಿ ಮರಣ
1978: ತ್ರಿಶ್ಶೂರ್ ಪೂರಂನಲ್ಲಿ ನಡೆದ ಪಟಾಕಿ ದುರಂತದಲ್ಲಿ ಎಂಟು ಸಾವು
1984: ತ್ರಿಶ್ಶೂರ್ ಕಡಂಶಂಕಡವ್ ಚರ್ಚ್ ಜಾಕ್ರೆಯಲ್ಲಿ ಪಟಾಕಿ ದುರಂತ 20 ಸಾವು
1987: ತ್ರಿಶ್ಶೂರ್ ವೇಲೂರಿನ ವೆಳ್ಳಾಟ್ಟಂಚೂರ್- ಕುಟ್ಟನ್ಮೂಲಿ ದೇಗುಲದಲ್ಲಿ ದುರಂತ 20 ಸಾವು
1987: ತಲಶ್ಶೇರಿ ಜಗನ್ನಾಥ ದೇವಾಲಾಯದದ ಬೆಡಿ ಮಹೋತ್ಸವ ನೋಡಲು ರೈಲು ಹಳಿಯಲ್ಲಿ ಕುಳಿತವರ ಮೇಲೆ ರೈಲು ಹರಿದು 27 ಸಾವು
1988 :ತ್ರಿಪ್ಪೂಣಿತ್ತುರ ಪಟಾಕಿ ಸಂಗ್ರಹಶಾಲೆಗೆ ಬೆಂಕಿ 10 ಸಾವು
1989 :ತ್ರಿಶ್ಶೂರ್ ಕಂಡಶ್ಶಂಕಡವ್ ಚರ್ಚ್‌ನಲ್ಲಿ ಪಟಾಕಿ ದುರಂತ 12 ಸಾವು