ಚೆನ್ನೈ: ತನ್ನನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸಿದರೆ ತಮಿಳ್ನಾಡಿನಲ್ಲಿ ಮದ್ಯ ನಿಷೇಧ ಮಾಡುತ್ತೇನೆಂದು ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಹೇಳಿದ್ದಾರೆ.
ಶನಿವಾರ ಐಲ್ಯಾಂಡ್ ಗ್ರೌಂಡ್ ನಲ್ಲಿ ನಡೆದ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಲಲಿತಾ, ತಮಿಳ್ನಾಡಿನಲ್ಲಿ ಒಂದೇ ಸಲ ಮದ್ಯ ನಿಷೇಧ ಹೇರುವುದು ಕಷ್ಟ. ಆದ್ದರಿಂದ ಹಂತ ಹಂತಗಳಾಗಿ ಮದ್ಯ ನಿಷೇಧ ಮಾಡಲಾಗುವುದು ಎಂದಿದ್ದಾರೆ.
ಎಐಎಡಿಎಂಕೆ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಹಂತ ಹಂತಗಳಾಗಿ ಮದ್ಯ ನಿಷೇಧವನ್ನು ಮಾಡಲಾಗುವುದು. ಮದ್ಯದ ಬಳಕೆ ಕಡಿಮೆಯಾಗುತ್ತಿದ್ದಂತೆ ಬಾರ್‌ಗಳನ್ನು ಮುಚ್ಚಲಾಗುವುದು. ಅದೇ ವೇಳೆ ಮದ್ಯ ಸೇವನೆ ನಿಲ್ಲಿಸಿದವರಿಗಾಗಿ ಪುನಶ್ಚೇತನ ಕೇಂದ್ರಗಳನ್ನು ಆರಂಭಿಸಲಾಗುವುದು.
197ರಲ್ಲಿ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರು ಮದ್ಯ ನಿಷೇಧವನ್ನು ತಳ್ಳಿ, ಮದ್ಯ ಸೇವನೆ ಗೊತ್ತಿಲ್ಲದ ಜನರಿಗೆ ಮದ್ಯವನ್ನು ಪರಿಚಯಿಸಿದ್ದರು. ಆದ್ದರಿಂದ ಮದ್ಯ ನಿಷೇಧದ ಬಗ್ಗೆ ಮಾತನಾಡುವ ಹಕ್ಕು ಕರುಣಾನಿಧಿ ಅವರಿಗಿಲ್ಲ ಎಂದಿದ್ದಾರೆ ಜಯಾ.