ಕೊಲ್ಲಂ ಅಗ್ನಿ ದುರಂತ: ರಕ್ತದಾನ ಮಾಡಲು ಸಾಲುಗಟ್ಟಿ ನಿಂತ ಆರೆಸ್ಸೆಸ್ಸ್ ಕಾರ್ಯಕರ್ತರು

ಕೊಲ್ಲಂನ ಪುಟ್ಟಿಂಗಲ್ ದೇವಾಲಯದಲ್ಲಿ ಸಂಭವಿಸಿದ ಅಗ್ನಿ ದುರಂತದ ಗಾಯಾಳುಗಳಿಗೆ ರಕ್ತದಾನ ಮಾಡಲು ಆಸ್ಪತ್ರೆಯ ಮುಂದೆ ರಾಷ್ಟ್ರೀಯ ಸ್ವಯಂಸೇವಕ್ ...
ಆಸ್ಪತ್ರೆಯ ಮುಂದೆ ಕೊಲ್ಲಂ ಅಗ್ನಿ ದುರಂತದ ಗಾಯಾಳುಗಳಿಗೆ ರಕ್ತದಾನ ಮಾಡಲು ಸಿದ್ಧರಾಗಿ ನಿಂತಿರುವ ಆರೆಸ್ಸೆಸ್  ಕಾರ್ಯಕರ್ತರು (ಕೃಪೆ: ಫೇಸ್ಬುಕ್ )
ಆಸ್ಪತ್ರೆಯ ಮುಂದೆ ಕೊಲ್ಲಂ ಅಗ್ನಿ ದುರಂತದ ಗಾಯಾಳುಗಳಿಗೆ ರಕ್ತದಾನ ಮಾಡಲು ಸಿದ್ಧರಾಗಿ ನಿಂತಿರುವ ಆರೆಸ್ಸೆಸ್ ಕಾರ್ಯಕರ್ತರು (ಕೃಪೆ: ಫೇಸ್ಬುಕ್ )
ತಿರುವನಂತಪುರಂ: ಕೊಲ್ಲಂನ ಪುಟ್ಟಿಂಗಲ್ ದೇವಾಲಯದಲ್ಲಿ ಸಂಭವಿಸಿದ ಅಗ್ನಿ ದುರಂತದ ಗಾಯಾಳುಗಳಿಗೆ ರಕ್ತದಾನ ಮಾಡಲು ಆಸ್ಪತ್ರೆಯ ಮುಂದೆ ರಾಷ್ಟ್ರೀಯ ಸ್ವಯಂಸೇವಕ್ ಸಂಘದ (ಆರೆಸ್ಸೆಸ್ಸ್ ) ಕಾರ್ಯಕರ್ತರು ಸಾಲುಗಟ್ಟಿ ನಿಂತಿದ್ದರು. ಹೀಗೆ ಸ್ವಯಂ ಸೇವಕರು ಆಸ್ಪತ್ರೆಯ ಮುಂದೆ ನಿಂತಿರುವ ಈ ಫೋಟೋವೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 
ತ್ರಿವೇಂಡ್ರಮ್ ಮೆಡಿಕಲ್ ಕಾಲೇಜಿನ ಹೊರಗೆ ರಕ್ತದಾನ ಮಾಡಲು ಸಿದ್ಧರಾಗಿ ನಿಂತಿರುವ ಕಾರ್ಯಕರ್ತರ ಫೋಟೋವನ್ನು ಆರೆಸ್ಸೆಸ್ಸ್ ತಮ್ಮ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿತ್ತು. ಭಾನುವಾರ ಪೋಸ್ಟ್ ಆಗಿದ್ದ ಈ ಫೋಟೋ 12 ಸಾವಿರಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಕೆಲವು ದಿನಗಳ ಹಿಂದೆ ಕೊಲ್ಕತ್ತಾ ಮೇಲ್ಸೇತುವೆ ಕುಸಿದಾಗ ಅಲ್ಲಿನ ರಕ್ಷಣಾ ಕಾರ್ಯಗಳಲ್ಲಿ ಆರೆಸ್ಸೆಸ್ಸ್  ತೊಡಗಿದ್ದ ಫೋಟೋ ಕೂಡಾ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. 
ಭಾನುವಾರ ಮುಂಜಾನೆ ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಿ ಜಾತ್ರಾ ಮಹೋತ್ಸವದ ವೇಳೆ ಸಂಭವಿಸಿದ ಪಟಾಕಿ ದುರಂತದಲ್ಲಿ 106 ಮಂದಿ ಸಾವನ್ನಪ್ಪಿದ್ದು 383 ಮಂದಿಗೆ ಗಾಯಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com