

ನವದೆಹಲಿ: ಯಹೂದಿಗಳ ಅಲ್ಪಸಂಖ್ಯಾತರ ಸ್ಥಾನಮಾನ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ ಎಂದು ಕೇಂದ್ರ ಸಚಿವೆ ನಜ್ಮಾ ಹೆಫ್ತುಲ್ಲಾ ಹೇಳಿದ್ದಾರೆ.
ಸಮುದಾಯದ ಸದಸ್ಯರಿಂದ ಕೇಂದ್ರ ಅಲ್ಪಸಂಖ್ಯಾತ ಇಲಾಖೆಗೆ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಮನವಿ ಬಂದಿದ್ದು ಮನವೀಯನ್ನು ಕಾನೂನು ಸಚಿವಾಲಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸಲಾಗಿದೆ ಎಂದು ನಜ್ಮಾ ಹೆಫ್ತುಲ್ಲಾ ತಿಳಿಸಿದ್ದಾರೆ.
ಭಾರತದಕ್ಕಿ ಸುಮಾರು 5,000 ಯಹೂದಿಗಳಿದ್ದಾರೆ, ದೇಶದಲ್ಲಿ ಒಟ್ಟಾರೆ 6 ಅಲ್ಪಸಂಖ್ಯಾತ ಸಮುದಾಯಗಳಿದ್ದು 2014 ರಲ್ಲಿ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗಿತ್ತು.
Advertisement